ಮನೆಗಾಗಿ ನಿರ್ಮಿಸಿದ್ದ ಪಂಚಾಂಗವನ್ನು ಕಿತ್ತೆಸೆದಿರುವ ಅರಣ್ಯಾಧಿಕಾರಿಗಳು

Share with

ಮನೆಗಾಗಿ ನಿರ್ಮಿಸಿದ್ದ ಪಂಚಾಂಗವನ್ನು ಕಿತ್ತೆಸೆದಿರುವ ಅರಣ್ಯಾಧಿಕಾರಿಗಳು.

ಬೆಳ್ತಂಗಡಿ: ಮನೆಗಾಗಿ ನಿರ್ಮಿಸಿದ್ದ ಪಂಚಾಂಗವನ್ನು ಅರಣ್ಯಾಧಿಕಾರಿಗಳು ಕಿತ್ತೆಸೆದಿರುವ ವಿದ್ಯಮಾನ ಕಳೆಂಜ ಗ್ರಾಮದಲ್ಲಿ ನಡೆದಿತ್ತು. ಇದನ್ನು ಪರಿಶೀಲಿಸಲು ಶನಿವಾರ ಶಾಸಕ ಹರೀಶ್ ಪೂಂಜ ಅವರು ಸ್ಥಳಕ್ಕೆ ಆಗಮಿಸಿ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೊನೆಗೆ ಸಚಿವರೊಂದಿಗೆ ಮಾತುಕತೆ ನಡೆಸಿದ ಬಳಿಕ ಅವರ ಸೂಚನೆಯಂತೆ ಯಥಾ ಸ್ಥಿತಿಯನ್ನು ಕಾಪಾಡುವಂತೆ ಸೂಚಿಸಲಾಯಿತು.

ಪರಿಶೀಲಿಸಲು ಶನಿವಾರ ಶಾಸಕ ಹರೀಶ್ ಪೂಂಜ ಅವರು ಸ್ಥಳಕ್ಕೆ ಆಗಮಿಸಿ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಘಟನೆ ಹೀಗಿದೆ:
ಕಳೆಂಜ ಗ್ರಾಮದ ಅಮ್ಮಿನಡ್ಕ ಕುದ್ದಮನೆ ದೇವಣ್ಣ ಗೌಡ ಎಂಬವರ ಪುತ್ರ ಲೋಲಾಕ್ಷ ಕುಟುಂಬ ಸುಮಾರು 150 ವರ್ಷದ ಹಿಂದೆ ತಮ್ಮ ಸ್ವಾಧೀನದ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿ ಪಂಚಾಂಗದ ಕೆಲಸ ಮಾಡಿದ್ದರು. ಆದರೆ ಅ.6ರಂದು ಅರಣ್ಯ ಇಲಾಖೆ ಮನೆ ನಿರ್ಮಾಣಕ್ಕೆ ಹಾಕಿದ್ದ ಪಂಚಾಂಗವನ್ನು ಕಿತ್ತೆಸೆದು ಬಡ ಕುಟುಂಬದ ಮುಂದೆ ದರ್ಪ ತೋರಿರುವ ಬಗ್ಗೆ ತೀವ್ರ ನೊಂದು ಆತ್ಮಹತ್ಯೆಗೆ ಮುಂದಾಗಿದ್ದರು. ಈ ವಿಚಾರ ತಿಳಿದ ಶಾಸಕ ಹರೀಶ್ ಪೂಂಜ ಅವರು ಅ.7 ರಂದು ಸ್ಥಳಕ್ಕೆ ಭೇಟಿ ನೀಡಿ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಸ್ಥಳದಲ್ಲೆ ಶೆಡ್ ನಿರ್ಮಾಣಕ್ಕೆ ಮುಂದಾದರು. ಈ ವೇಳೆ ಅರಣ್ಯ ಇಲಾಖೆ ಮತ್ತು ಶಾಸಕರ ಮಧ್ಯೆ ಬಿಸಿಯೇರಿದ ಮಾತಿನ ಚಕಮಕಿ ನಡೆಯಿತು.

ಕಳೆಂಜ ಗ್ರಾಮದ ಸರ್ವೆ ನಂಬ್ರ 309ನಲ್ಲಿ ಸುಮಾರು 120ಕ್ಕೂ ಅಧಿಕ ಮಂದಿ ವಾಸವಾಗಿದ್ದಾರೆ. ಆದರೆ ಲೋಲಾಕ್ಷ ಅವರು ಹೊಂದಿರುವ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಮುಂದಾದಾಗ ಅರಣ್ಯ ಇಲಾಖೆ ಅವರ ಮೇಲೆ ದರ್ಪ ತೋರಿರುವುದು ಜನರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.

309 ಸರ್ವೇ ನಂಬರ್ ನಲ್ಲಿ ಸುಮಾರು 120ಕ್ಕೂ ಅಧಿಕ ಮಂದಿ ವಾಸವಾಗಿದ್ದಾರೆ. ಆದರೆ ಇದು ಅರಣ್ಯ ಎಂದಿರುವುದರಿಂದ ಅರಣ್ಯ ಇಲಾಖೆ ಮನೆ ಕೆಡವಿದೆ, ಮನೆ ಮಂದಿಗೆ ಯಾವುದೇ ನೋಟಿಸ್ ಮಾಹಿತಿ ನೀಡದೆ ತೆರವುಗೊಳಿಸಿದ್ದಾರೆ, ಇದೇ ಸರ್ವೆ ನಂಬ್ರದಲ್ಲಿ ಎಕ್ರೆಗಟ್ಟಲೆ ಮರ ಕಡಿದವರ ಮೇಲೆ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಾಸಕರಲ್ಲಿ ಊರವರು ದೂರಿಕೊಂಡರು. ಈ ಸಂದರ್ಭ ಮಾತನಾಡಿದ ಶಾಸಕರು ಮನೆ ನಿರ್ಮಾಣದ ಜಾಗ ಅರಣ್ಯ ಇಲಾಖೆಗೆ ಸೇರಿದ ಜಾಗವಲ್ಲ ಇಲ್ಲಿ ಅಡ್ಡಿಪಡಿಸುವ ಮೊದಲು ಕಂದಾಯ ಇಲಾಖೆ ಹಾಗೂ ಅರಣ್ಯ ಜಂಟಿ ಸರ್ವೇ ನಡೆಸಿ, ಇಲ್ಲಿ ತಾತ್ಕಾಲಿಕ ಮನೆ ನಿರ್ಮಾಣ ಮಾಡುತ್ತೇವೆ.

ನೀವು ಜಾಗದ ಸರ್ವೆ ನಡೆಸಿ ಮನೆ ನಿರ್ಮಾಣದ ಜಾಗ ಅರಣ್ಯ ಎಂದಾದರೆ ನಾನೇ ಮನೆ ತೆರವುಗೊಳಿಸಲು ಸೂಚಿಸುತ್ತೇನೆ ಎಂದು ಶಾಸಕರು ಅರಣ್ಯಾಧಿಕಾರಿಗಳಿಗೆ ತಾಕೀತು ಮಾಡಿದರು. ಇದೇ ಸಂದರ್ಭದಲ್ಲಿ ಸಮವಸ್ತ್ರ ಧರಿಸದೆ ಘಟನಾ ಸ್ಥಳಕ್ಕೆ ಆಗಮಿಸಿದ ಆರ್.ಎಫ್.ಒ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡು ಅವರನ್ನು ಅಮಾನತು ಮಾಡುವಂತೆ ಎ.ಸಿ.ಎಫ್‌.ಗೆ ಸೂಚನೆ ನೀಡಿದರು. ಸ್ಥಳದಿಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಕರೆ ಮಾಡಿದ ಶಾಸಕರು ಸಮಸ್ಯೆ ಬಗ್ಗೆ ಮನವರಿಕೆ ಮಾಡಿದರು. ಸಚಿವರು ಸದ್ಯ ತೆರವುಗೊಳಿಸದಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಯಥಾಸ್ಥಿತಿ ಕಾಪಾಡಿ, ಜಾಗದ ಸರ್ವೇ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವಂತೆ ಆದೇಶಿಸಿದರು. ಪುತ್ತೂರು ಎಸಿಎಫ್ ಸುಬ್ಬಯ್ಯ ನಾಯ್ಕ ಉಪ್ಪಿನಂಗಡಿ ಅರಣ್ಯಧಿಕಾರಿ ಜಯಪ್ರಕಾಶ್, ಕಳೆಂಜ ಉಪ ವಲಯರಣ್ಯಾಧಿಕಾರಿ ಪ್ರಶಾಂತ್, ಧರ್ಮಸ್ಥಳ ಎಸ್.ಐ. ಸ್ಥಳದಲ್ಲಿದ್ದರು.


Share with

Leave a Reply

Your email address will not be published. Required fields are marked *