ಉಪ್ಪಳ: ಅಡ್ಕ ಶ್ರೀ ಭಗವತೀ ಕ್ಷೇತ್ರದ ಮಹಾಸಭೆ ನಿನ್ನೆ ನಡೆಯಿತು. ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಕ್ಷೇತ್ರಕ್ಕೊಳಪಟ್ಟ ಪ್ರತಿ ಗ್ರಾಮಗಳಿಂದ ಕನಿಷ್ಠ ಒಬ್ಬರನ್ನು ಸಮಿತಿಯ ಸದಸ್ಯರನ್ನಾಗಿ ಸೇರಿಸಿಕೊಂಡು ನೂತನ ಆಡಳಿತ ಸಮಿತಿಯನ್ನು ರೂಪಿಕರಿಸಲಾಯಿತು. ಅಧ್ಯಕ್ಷರಾಗಿ ಕೃಷ್ಣ ಪಿ ಅಡ್ಕ ,ಉಪಾಧ್ಯಕ್ಷರಾಗಿ ಪ್ರಮೋದ್ ಕುಮಾರ್ ಹೇರೂರ್, ,ಪ್ರದಾನ ಕಾರ್ಯದರ್ಶಿ ಜಯಂತ ವಿ ಬಂದಿಯೋಡ್ , ಜೊತೆ ಕಾರ್ಯದರ್ಶಿ ಅಮಿತ್ ಪರಂಕಿಲ ,ಕೋಶಾಧಿಕಾರಿಯಾಗಿ ಚಂದ್ರಶೇಖರ (ಚರಣ್ )ಬಂದಿಯೋಡ್, ಲೆಕ್ಕ ಪರಿಶೊಧಕರಾಗಿ :ಶಿವಾನಂದ ಅಂಬಾರ್ ಇವರನ್ನು ಪುನಃ ಹಾರಿಸಲಾಯಿತು. ಒಟ್ಟು ೨೫ ಜನರನ್ನು ಒಳಗೊಂಡ ನೂತನ ಸಮಿತಿಯು ಮುಂದಿನ ೨ ರ‍್ಷ ಸೇವೆಗೆಯ್ಯಲಿದ್ದಾರೆ.