ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ (ರೀ ) ಬಂಟ್ವಾಳ ಇದರ ಪಾಣೆಮಂಗಳೂರು ವಲಯದ ಸಜಿಪಮೂಡ ಒಕ್ಕೂಟ ದ ನೂತನ ಸ್ವ-ಸಾಯ ಸಂಘ “ಮಾಷಾಲ್ಲ” ಉದ್ಘಾಟಿಸಲಾಯಿತು. ಸಂಘದ ಅಧ್ಯಕ್ಷರಾಗಿ ಜಮೀಳಾ, ಕಾರ್ಯದರ್ಶಿ ಆಯಿಷಾ, ಕೋಶಾಧಿಕಾರಿ ಅಳಿಮಮ್ಮ ಆಯ್ಕೆಯಾದರು. ಪಾಣೆಮಂಗಳೂರು ವಲಯದ ಮೇಲ್ವಿಚಾರಕಿ ಅಮಿತಾ ಸಂಘದ ದಾಖಲಾತಿ ಪುಸ್ತಕ ಹಸ್ತಾಂತರಿಸಿ ಸಂಘ ರಚನೆಯ ಉದ್ದೇಶ, ರೀತಿ ನಿಯಮ ಹಾಗೂ ಸಂಘದಿಂದ ಆಗುವ ಉಪಯೋಗದ ಬಗ್ಗೆ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಸಜಿಪಮೂಡ ಒಕ್ಕೂಟದ ಸೇವಾಪ್ರತಿನಿಧಿ ಬಬಿತ, ನೂತನ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.