ಮಂಗಳೂರು: ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಿಂತಾನಿಕಟ್ಟೆ ಶಾಖೆ ಪೂಪಾಡಿಕಟ್ಟೆ ಘಟಕದ ವತಿಯಿಂದ ವಿಶ್ವ ಹಿಂದೂ ಪರಿಷದ್ ಸ್ಥಾಪನ ದಿನದ ಅಂಗವಾಗಿ ಸೆ. 6ರಂದು ರಾತ್ರಿ ಶ್ರೀ ಮಹಾದೇವಿ ಮಹಾಮ್ಮಯಿ ಕೂಡಿಬೈಲು ದೇವಸ್ಥಾನದಲ್ಲಿ ಶ್ರೀ ಕೃಷ್ಣ ದೇವರ ಹಾಗೂ ಭಾರತ ಮಾತೆಯ ಭಾವಚಿತ್ರ ಇಟ್ಟು ಶ್ರೀ ವೀರಾಂಜನೇಯ ಭಜನ ಮಂಡಳಿ ನಾವೂರು ಇವರಿಂದ ಭಜನ ಕಾರ್ಯಕ್ರಮ ಸತ್ಸಂಗ ನಡೆಯಿತು.
ಮಹಾಪೂಜೆ ಬಳಿಕ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಸೆಪ್ಟೆಂಬರ್ 2 ರಂದು ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಕ್ಕೆ ಹೋಲಿಸಿ ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವುದಾಗಿ ನೀಡಿದ ಹೇಳಿಕೆಗೆ ಪ್ರತಿಯಾಗಿ ಹೇಳಿಕೆ ನೀಡಿದವ ಅದೆ ರೋಗ ಬಂದು ಭೂ ಲೋಕದಿಂದ ನಿರ್ಮೂಲನೆ ಆಗಲಿ ಎಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಿಂತಾನಿಕಟ್ಟೆ ಶಾಖೆ ಪೂಪಾಡಿಕಟ್ಟೆ ಘಟಕದ ವತಿಯಿಂದ ದೇವರಲ್ಲಿ ಪ್ರಾರ್ಥಿಸಲಾಯಿತು.
ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಜಿಲ್ಲಾ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ ಇವರು ಬೌದ್ಧಿಕ್ ನೀಡಿದರು.
ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ಟಾಳ ಪ್ರಖಂಡದ ಸಾಪ್ತಾಹಿಕ್ ಮಿಲನ್ ಪ್ರಶಾಂತ್ ಕೊಟ್ಟಾರಿ ಮತ್ತು ಘಟಕದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗೂ ಊರಿನ ಭಕ್ತರು ಉಪಸ್ಥಿತರಿದ್ದರು.