ಉಡುಪಿ: ಮುಲ್ಕಿ ಸಮೀಪ ನಾಲ್ವರ ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ಈಜಲು ಹೋಗಿ ನೀರು ಪಾಲಾದ ಪ್ರಕರಣ ನಡೆದಿತ್ತು. ಇಂದು ಮೃತ ವಿದ್ಯಾರ್ಥಿಗಳ ಪೋಷಕರು ಉಡುಪಿಯಲ್ಲಿ ಸಿಎಂ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ತಮ್ಮ ಮಕ್ಕಳಿಗೆ ತಲಾ 5 ಲಕ್ಷ ರೂ.ಪರಿಹಾರ ನೀಡಬೇಕು ಎಂದು ಸಿಎಂ ಬಳಿ ಮನವಿ ಮಾಡಿಕೊಂಡರು.
ಸುರತ್ಕಲ್ ನ ಮಾಜಿ ಶಾಸಕ ಮೊಯಿದಿನ್ ಭಾವ ಜೊತೆ ಉಡುಪಿಗೆ ಆಗಮಿಸಿದ್ದ ಪೋಷಕರು ಮಾತನಾಡಿ, ನಮಗೆ ಇನ್ನೂ ಕೂಡ ಪರಿಹಾರ ಸಿಕ್ಕಿಲ್ಲ. ನಾವೆಲ್ಲ ಬಡವರ ಮನೆಯವರು. ನಮ್ಮ ಮಕ್ಕಳು ನೀರು ಪಾಲಾಗಿದ್ದಾರೆ. ತಕ್ಷಣ ಪರಿಹಾರ ನೀಡಬೇಕು ಎಂದು ತಮ್ಮ ಅಹವಾಲು ಹೇಳಿಕೊಂಡರು. ಮಾಜಿ ಶಾಸಕ ಮೊಯಿದಿನ್ ಭಾವ ಮಾತನಾಡಿ, ಇನ್ನೇನು ಕೆಲವೇ ದಿನಗಳಲ್ಲಿ ನೀತಿ ಸಂಹಿತೆ ಜಾರಿಯಾಗುತ್ತದೆ. ಅದಕ್ಕೂ ಮುನ್ನ ಮುಖ್ಯಮಂತ್ರಿಗಳು ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.