ಸರ್ಕಾರದ ಶಕ್ತಿ ಯೋಜನೆ ಇದೀಗ ಸಂಕಷ್ಟದಲ್ಲಿದೆ. ಈ ಯೋಜನೆಯಿಂದ ಮಹಿಳೆಯರು ಮಠ, ಮಂದಿರ ಸುತ್ತಾಟದಿಂದ ಸಾರಿಗೆ ಇಲಾಖೆ ಶ್ರೀಮಂತವಾಗುತ್ತಿದೆ. ಆದರೆ, ಸಿಬ್ಬಂದಿಯನ್ನು ಮತ್ತೆ ಬಡತನಕ್ಕೆ ತಳ್ಳುತ್ತಿದೆ.
ಕಲ್ಯಾಣ ಕರ್ನಾಟಕ ಸಾರಿಗೆ ಸಿಬ್ಬಂದಿಗೆ ಪ್ರತಿ ತಿಂಗಳು 1ನೇ ತಾರೀಖಿಗೆ ಸಂಬಳ ಆಗುತ್ತಿತ್ತು. ಈ ಬಾರಿ 10ದಿನ ಕಳೆದರೂ ಇನ್ನೂ ವೇತನ ಆಗದಿರುವುದು ಸಿಬ್ಬಂದಿ ಅಳಲು ತೋಡಿದ್ದಾರೆ. ಈ ಯೋಜನೆಯಡಿ 126 ಕೋಟಿ ನೀಡಬೇಕಾದ ಸರ್ಕಾರ ಕೇವಲ 37 ಕೋಟಿ ನೀಡಿದೆ. ಹಾಗಾಗಿ ಸಂಬಳವಾಗಿಲ್ಲವೆಂದು ವರದಿಯಾಗಿದೆ.