ರಾಜ್ಯ ಸರಕಾರ ಘೋಷಿಸಿದ್ದ 200 ಯೂನಿಟ್ ಉಚಿತ ವಿದ್ಯುತ್ – ಗೃಹಜ್ಯೋತಿ ಯೋಜನೆಗೆ ಅನೇಕ ಮಂದಿ ಅರ್ಜಿ ಸಲ್ಲಿಸಿದ್ದರು. ಜುಲೈ 27ರ ಒಳಗಾಗಿ ಈ ಯೋಜನೆಗೆ ನೋಂದಾಯಿಸಿಕೊಂಡವರಿಗೆ 200 ಯೂನಿಟ್ ವರೆಗೆ ವಿದ್ಯುತ್ ಉಚಿತ ಎಂದು ಕರ್ನಾಟಕ ರಾಜ್ಯ ಸರಕಾರ ಹೇಳಿತ್ತು. ಈ ನಿರೀಕ್ಷೆಯಲ್ಲಿದ್ದ ಬಹುತೇಕ ಗ್ರಾಹಕರು ತಮಗೆ ಬಂದ ವಿದ್ಯುತ್ ಬಿಲ್ ನೋಡಿ ಶಾಕ್ ಗೆ ಆಗಿದ್ದಾರೆ.
200 ಯೂನಿಟ್ ವರೆಗೆ ಮಾತ್ರ ವಿದ್ಯುತ್ ಉಚಿತ. ಅದಕ್ಕಿಂತ ಹೆಚ್ಚು ಬಳಕೆ ಮಾಡಿದವರು ಸಂಪೂರ್ಣ ಬಿಲ್ ಕಟ್ಟಬೇಕು ಎಂದು ಸರಕಾರ ಮೊದಲೇ ಹೇಳಿತ್ತು. ಆದರೆ ಇದೀಗ ಜುಲೈ 27ರ ಒಳಗೆ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡ, 200 ಯೂನಿಟ್ ಗಿಂತ ಕಡಿಮೆ ಉಪಯೋಗ ಮಾಡಿದವರಿಗೂ ಬಿದ್ಯುತ್ ಬಿಲ್ ಬಂದಿದೆ.
ಕೇವಲ 57, 58 ಯೂನಿಟ್ ವಿದ್ಯುತ್ ಬಳಕೆ ಮಾಡುವವರಿಗೂ ಎಸ್ಕಾಂ ಉಚಿತ ಕೊಡುಗೆಯನ್ನು 8, 9, 10 ಯೂನಿಟ್ ಗಳಿಗೆ ಸೀಮಿತಗೊಳಿಸಿ ಮಿಕ್ಕ ಬಳಕೆಯ ವಿದ್ಯುತ್ ಗಾಗಿ ಗ್ರಾಹಕರಿಗೆ 100-200 ರೂ. ವಿದ್ಯುತ್ ಬಿಲ್ ನೀಡಿದೆ.
100 ಯೂನಿಟ್ ಒಳಗೆ ವಿದ್ಯುತ್ ಬಳಸುವವರು ಶೂನ್ಯ ಬಿಲ್ ಬರಲಿದೆ ಎಂದೇ ಭಾವಿಸಿದ್ದರು. ಆದರೆ ಎಸ್ಕಾಂ ಒಂದು ವರ್ಷದ ಬಳಕೆಯ ಯೂನಿಟ್ ಗಳ ಸರಾಸರಿ ಲೆಕ್ಕ ತೆಗೆದುಕೊಂಡು ಇಂತಿಷ್ಟು ಯೂನಿಟ್ ಉಚಿತ ಎಂದು ನಿಗದಿಪಡಿಸಿದೆ.
100 ಯೂನಿಟ್ ಒಳಗೆ ವಿದ್ಯುತ್ ಬಳಸುವವರು ಶೂನ್ಯ ಬಿಲ್ ಬರಲಿದೆ ಎಂದೇ ಭಾವಿಸಿದ್ದರು. ಆದರೆ ಎಸ್ಕಾಂ ಒಂದು ವರ್ಷದ ಬಳಕೆಯ ಯೂನಿಟ್ ಗಳ ಸರಾಸರಿ ಲೆಕ್ಕ ತೆಗೆದುಕೊಂಡು ಇಂತಿಷ್ಟು ಯೂನಿಟ್ ಉಚಿತ ಎಂದು ನಿಗದಿಪಡಿಸಿದೆ.
ಗೃಹಜ್ಯೋತಿ ಯೋಜನೆಯಡಿ ನೋಂದಾಯಿಸಿಕೊಂಡವರಿಗೆ ಉಚಿತ ವಿದ್ಯುತ್ ಎಂದು ಹೇಳಿ ಮೋಸ ಮಾಡಲಾಗಿದೆ. 200 ಯೂನಿಟ್ ಉಚಿತ ಎಂದು ಹೇಳಿ ಸರಕಾರ ಈ ರೀತಿ ಮೋಸ ಮಾಡಿದ್ದು ಸರಿಯಲ್ಲ. ನಾವು ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.