
ಮಂಗಳೂರು: ಸುರತ್ಕಲ್ ನ ಸೌತ್ ಇಂಡಿಯನ್ ಬ್ಯಾಂಕ್ ಬ್ರ್ಯಾಂಚ್ ಪಕ್ಕದಲ್ಲಿರುವ ಎಟಿಎಂನಲ್ಲಿ ಹಣ ಲೂಟಿಗೆ ಯತ್ನಿಸಿ ವಿಫಲವಾದ ಘಟನೆ ಆ.4 ರ ಶುಕ್ರವಾರ ನಡೆದಿದೆ.
ಡಿಸಿಪಿ ದಿನೇಶ್ ಕುಮಾರ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಶ್ವಾನದಳ ಆಗಮಿಸಿದೆ.
ಎಟಿಎಂ ಕೇಂದ್ರಕ್ಕೆ ಜೆಸಿಬಿ ನುಗ್ಗಿಸಿ ಕಳ್ಳತನಕ್ಕೆ ಯತ್ನಿಸಿದ್ದಾರೆ, ಸೈರನ್ ಆಗಿದ್ದರಿಂದ ಕಳ್ಳರು ಓಡಿ ಹೋಗಿದ್ದಾರೆ ಎನ್ನಲಾಗಿದೆ.