ಫೆ.25 ರಂದು ಉಚಿತ ವೈದ್ಯಕೀಯ ಶಿಬಿರ ಹಾಗೂ ರಕ್ತದಾನ ಶಿಬಿರ

Share with

ಮಂಗಳೂರು: ಯೆನೆಪೋಯ ಮೆಡಿಕಲ್‌ ಕಾಲೇಜ್‌ ಮತ್ತು ಆಸ್ಪತ್ರೆ ಹಾಗೂ ಶತಮಾನೋತ್ಸವ ಸಮಿತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಳೂರು ಇದರ ಜಂಟಿ ಸಹಯೋಗದಲ್ಲಿ ಶ್ರೀ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅಭಿಮಾನಿ ಬಳಗದ ವತಿಯಿಂದ ಇದೇ ಬರುವ ಫೆ.25 ಆದಿತ್ಯವಾರದಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿನಲ್ಲಿ ಉಚಿತ ವೈದ್ಯಕೀಯ ಶಿಬಿರ ಹಾಗೂ ರಕ್ತದಾನ ಶಿಬಿರವು ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರ ವರೆಗೆ ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ರಕ್ತದಾನ ಮಾಡಲಿರುವ ಶಿಬಿರಾರ್ಥಿಗಳಿಗೆ ಉದ್ಯಮಿ ಶ್ರೀ ಮೋಹನ್ ಶೆಟ್ಟಿ ಮಜ್ಜಾರ್ ರವರ ಕೊಡುಗೆಯಲ್ಲಿ ಟಿ-ಶರ್ಟ್ ನೀಡಲಾಗುವುದು. ರಕ್ತದಾನ ಶಿಬಿರಕ್ಕೆ ಈಗಾಗಲೇ ಸುಮಾರು 50 ಮಂದಿ ಹೆಸರು ನೋಂದಾಯಿಸಿದ್ದು, 100 ಕ್ಕಿಂತಲೂ ಅಧಿಕ ಮಂದಿ ರಕ್ತದಾನ ಶಿಬಿರದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ರಕ್ತದಾನ ಮಾಡಲಿಚ್ಚಿಸುವವರು ಮೊಬೈಲ್‌ ಸಂಖ್ಯೆ 9633161529, 9496071187, 9567783813 ಸಂಪರ್ಕಿಸಬೇಕಾಗಿ ವಿನಂತಿಸಲಾಗಿದೆ.


Share with

Leave a Reply

Your email address will not be published. Required fields are marked *