ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಗಾಂಧಿ ಜಯಂತಿ” ಕಾರ್ಯಕ್ರಮ

Share with

ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಕ್ಟೋಬರ್ 02ರಂದು "ಗಾಂಧಿ ಜಯಂತಿ" ಕಾರ್ಯಕ್ರಮ ಆಚರಿಸಲಾಯಿತು.

ಪುತ್ತೂರು: ಬನ್ನೂರು ಕೃಷ್ಣನಗರ ಸಮೀಪದಲ್ಲಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಕ್ಟೋಬರ್ 02ರಂದು “ಗಾಂಧಿ ಜಯಂತಿ” ಕಾರ್ಯಕ್ರಮ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ಡಾ। ಶ್ರೀಧರ್ ಗೌಡ ಪಾನತ್ತಿಲ ಇವರು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಬಹಳ ಅರ್ಥಪೂರ್ಣವಾಗಿ ಮತ್ತು ಸಂಕ್ಷಿಕ್ತವಾಗಿ ನಾವು ನಮ್ಮ ಜೀವನದಲ್ಲಿ ಯಾವ ರೀತಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿ ಕೊಟ್ಟರು.

ಕಾರ್ಯ್ರಮದಲ್ಲಿ ಸಂಸ್ಥೆಯ ಸಂಚಾಲಕರಾದ ಶ್ರೀಯುತ ಎ.ವಿ. ನಾರಾಯಣ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ಗಣೇಶ್ ಯನ್, ಎವಿಜಿ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಗೌಡ ಕಳುವಾಜೆ, ಪೋಷಕ ವೃಂದದವರು, ಪುಟಾಣಿ ಮಕ್ಕಳು ಉಪಸ್ಥಿಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಗೆ ಪೋಡಿಯಂನ್ನು ಕೊಡುಗೆಯಾಗಿ ನೀಡಿದ ಸಂಸ್ಥೆಯ ಶಿಕ್ಷಕಿಯಾದ ಶ್ರೀಮತಿ ಯಶುಭ ರೈ ಮತ್ತು ಇವರ ಮಕ್ಕಳಾದ ಮಾ.ಚಿಂತನ್ ರೈ ಮತ್ತು ಮಾ.ಚಿರಂತ್ ರೈ ಇವರಿಗೆ ಮುಖ್ಯ ಅತೀಥಿ ಡಾ। ಶ್ರೀಧರ್ ಗೌಡ ಇವರು ಸನ್ಮಾನಿಸಿದರು.

ಇವರಿಗೆ ಸಂಸ್ಥೆಯ ಪರವಾಗಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ವೆಂಕಟ್ರಮಣ ಗೌಡ ಕಳುವಾಜೆ ಇವರು ಸ್ಮರಣಿಕೆ ನೀಡಿ ಗೌರವಿಸಿದರು. ಹಾಗೆಯೇ ಸಂಸ್ಥೆಯ ಕಾರ್ಯದರ್ಶಿ ಶ್ರೀಯುತ ಗುಡ್ಡಪ್ಪ ಗೌಡ ಬಲ್ಯ ಇವರು ಗಾಂಧಿಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಮಹತ್ವವನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಗೆ ಪೋಡಿಯಂನ್ನು ಕೊಡುಗೆಯಾಗಿ ನೀಡಿದ ಸಂಸ್ಥೆಯ ಶಿಕ್ಷಕಿಯಾದ ಶ್ರೀಮತಿ ಯಶುಭ ರೈ ಮತ್ತು ಇವರ ಮಕ್ಕಳಾದ ಮಾ.ಚಿಂತನ್ ರೈ ಮತ್ತು ಮಾ.ಚಿರಂತ್ ರೈ ಇವರಿಗೆ ಮುಖ್ಯ ಅತೀಥಿ ಡಾ। ಶ್ರೀಧರ್ ಗೌಡ ಇವರು ಸನ್ಮಾನಿಸಿದರು.

ಸಂಸ್ಥೆಯ ಅಧ್ಯಕ್ಷರಾದ ವೆಂಕಟರಮಣ ಗೌಡ ಕಳುವಾಜೆ ಇವರು ಸಭಾಧ್ಯಕ್ಷತೆಯನ್ನು ವಹಿಸಿಕೊಂಡರು. ಕಾರ್ಯ್ರಮದಲ್ಲಿ ಸಂಸ್ಥೆಯ ಸಂಚಾಲಕರಾದ ಶ್ರೀಯುತ ಎ.ವಿ. ನಾರಾಯಣ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ಗಣೇಶ್ ಯನ್, ಎವಿಜಿ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಗೌಡ ಕಳುವಾಜೆ, ಪೋಷಕ ವೃಂದದವರು, ಪುಟಾಣಿ ಮಕ್ಕಳು ಉಪಸ್ಥಿಯಲ್ಲಿದ್ದರು.

ಸಂಸ್ಥೆಯ ಸಹಾಯಕರಾದ ಶ್ರೀಯುತ ನಾರಾಯಣ ಕುಲಾಲ್, ಶ್ರೀಮತಿ ಭುವನೇಶ್ವರಿ ಸಹಕರಿಸಿದರು. ಶಾಲೆಯ ಶಿಕ್ಷಕಿಯಾದ ಶ್ರೀಮತಿ ಯಶುಭಾ ರೈ ಇವರು ಪ್ರಾರ್ಥಿಸಿದರು. ಸಂಸ್ಥೆಯ ಪ್ರಾಂಶುಪಾಲೆ ಶ್ರೀಮತಿ ಉಷಾ ಕಿರಣ ಕೆ.ಯಸ್ ಇವರು ಅತಿಥಿಯರನ್ನು ಸ್ವಾಗತಿಸಿದರು, ಸಂಸ್ಥೆಯ ಶಿಕ್ಷಕಿ ಶ್ರೀಮತಿ ವನಿತಾ ಇವರು ಸಂವಿಧಾನದ ಪೂರ್ವ ಪೀಠಿಕೆ ಮತ್ತು ಗಾಂಧೀಜಿಯವರ ಜೀವನದ ಮಹತ್ವವನ್ನು ವಾಚಿಸಿದರು. ಸಂಸ್ಥೆಯ ಶಿಕ್ಷಕಿಯರು ಗಾಂಧೀಜಿಯ ಸರ್ವಧರ್ಮ ಪ್ರಾರ್ಥನೆಯನ್ನು ಹಾಡಿದರು, ಸಂಸ್ಥೆಯ ಉಪಾಧ್ಯಕ್ಷರು ಶ್ರೀಯುತ ಉಮೇಶ್ ಮಳುವೇಲು ವಂದಿಸಿದರು, ಸಂಸ್ಥೆಯ ಶಿಕ್ಷಕಿ ಶ್ರೀಮತಿ ಯಶುಭ ರೈ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.


Share with

Leave a Reply

Your email address will not be published. Required fields are marked *