ಪುತ್ತೂರು: ಇಲ್ಲಿನ ಫ್ರೆಂಡ್ಸ್ ಬಳಂತಿಮೊಗರು ಆಶ್ರಯದಲ್ಲಿ ಬಳಂತಿಮೊಗರು ದೇವಸ್ಥಾನದ ಎದುರು ಭಾಗದ ಗದ್ದೆಯಲ್ಲಿ ಕೆಸರ್‌ಡ್ ಒಂಜಿ ದಿನ ಲೇಸ್ ಜು.9 ರಂದು ವಿಜೃಂಭಣೆಯಿಂದ ಜರಗಿತು.
ಬೆಳಿಗ್ಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ರಾಮ ಲಕ್ಷಣ ಜೋಡುಕರೆ ಕಂಬಳದ ಅಧ್ಯಕ್ಷ ಕ್ಯಾಪ್ಟನ್ ಬ್ರಿಜೇಶ್ ಚೌಟ ವಹಿಸಿದ್ದರು. ಪುಣಚ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಯಸ್. ಆರ್. ರಂಗಮೂರ್ತಿ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಯಾಗಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಗಣೇಶೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಗ್ರಾಮೀಣ ಸೊಗಡಿನ ಆಟಗಳ ಜೊತೆಗೆ ಪುರುಷರಿಗೆ ವಾಲಿಬಾಲ್, ಕಬಡ್ಡಿ, ಹಗ್ಗಜಗ್ಗಾಟ, ಓಟ, ಗೂಟ ಓಟ, ಪ್ಲೇಟ್ ಓಟ, ಹಾಳೆಯಲ್ಲಿ ಎಳೆಯುವ ಆಟವನ್ನು ಆಯೋಜಿಸಲಾಗಿತ್ತು. ಜೊತೆಗೆ ಮಹಿಳೆಯರಿಗೆ ತ್ರೋಬಾಲ್, ಹಗ್ಗ ಜಗ್ಗಾಟ, ಓಟ, ಹಿಮ್ಮುಖ ಓಟ, ಬಾಟಲಿಗೆ ನೀರು ತುಂಬಿಸುವುದು, ಪ್ಲೇಟ್ ಓಟ ಹಾಗೂ ಓಟ, ಹಿಮ್ಮುಖ ಓಟ, ಹಾಳೆ ಎಳೆಯುವ ಆಟವನ್ನು ಆಯೋಜಿಸಲಾಗಿತ್ತು. ಇದರ ಜೊತೆಗೆ ಹಿರಿಯರಿಗೂ ವಿವಿಧ ಆಟವನ್ನು ಆಯೋಜಿಸಿದ್ದರು. ನೂರಾರು ಮಂದಿ ಗ್ರಾಮೀಣ ಲೇಸ್‌ನಲ್ಲಿ ಪಾಲ್ಗೊಂಡು, ಕೆಸರಿಗೆ ಇಳಿದು ಕುಣಿದಾಡಿ ತುಳು ಸಂಸ್ಕೃತಿಯ ನಾನಾ ರೂಪಗಳನ್ನು ಕಂಡು ಸಂಭ್ರಮಿಸಿದರು.