ಬೆಂಗಳೂರು: ಇಂದು(ಜು.12) ಕನ್ನಡ ಚಲನಚಿತ್ರ ನಟ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ರವರ 61ನೇ ವರ್ಷದ ಹುಟ್ಟುಹಬ್ಬ. ಬೆಂಗಳೂರಿನ ನಾಗವಾರದಲ್ಲಿರುವ ಶಿವಣ್ಣನ ಮನೆ ಮುಂದೆ ಜು.11ರ ಮಧ್ಯ ರಾತ್ರಿ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ಸೆಲೆಬ್ರೆಟಿಗಳು, ಆಪ್ತರು ಹಾಗೂ ಆಭಿಮಾನಿಗಳಿಂದ ಶುಭಾಶಯದ ಮಹಾಪೂರವೇ ಹರಿದುಬರುತ್ತಿದೆ.
ಇವರು ಸ್ಯಾಂಡಲ್‌ವುಡ್ ಅಲ್ಲದೆ ಪರಭಾಷೆಗಳಲ್ಲೂ ಪಾತ್ರವಹಿಸಿದ್ದಾರೆ. ಇಂದು ಬೆಳಗ್ಗೆ 11:45ಕ್ಕೆ ‘ಘೋಸ್ಟ್’ ಸಿನಿಮಾ ತಂಡದಿಂದ ‘ಬಿಗ್ ಡ್ಯಾಡಿ’ ವಿಡಿಯೋ ರಿಲೀಸ್ ಆಗಲಿದ್ದು, ಅವರ ನಟನೆಯ ಇನ್ನೂ ಕೆಲವು ಸಿನಿಮಾಗಳ ತಂಡದಿಂದ ಹೊಸ ಅಪ್ಡೇಟ್ ಸಿಗೋ ಸಾಧ್ಯತೆ ಇದೆ.