ಹೊಸಂಗಡಿಯಲ್ಲಿ ಬಿರುಸಿನಿಂದ ನಡೆಯುತ್ತಿರುವ ಹೆದ್ದಾರಿ ಅಭಿವೃದ್ದಿ ಕಾಮಗಾರಿ

Share with


ಮಂಜೇಶ್ವರ: ಕಾಸರಗೊಡು ಜಿಲ್ಲೆಯಲ್ಲಿ ಆರಂಭಗೊoಡ ಹೆದ್ದಾರಿ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಇದರಂತೆ  ಹೊಸಂಗಡಿಯಲ್ಲಿ ಎರಡು ಹೆದ್ದಾರಿ ರಸ್ತೆ ಹಾಗೂ ಒಂದು ಸರ್ವೀಸ್ ರಸ್ತೆ ಈಗಾಗಲೇ ಸಿದ್ದಗೊಂಡಿದ್ದು, ಇನ್ನೊಂದು ಸರ್ವೀಸ್ ರಸ್ತೆ ನಿರ್ಮಾಣದ ಹಂತದಲ್ಲಿದೆ. ತಲಪಾಡಿಯಿಂದ ಹೊಸಂಗಡಿ ಪೇಟೆ ತನಕ ಈಗಾಗಲೇ ರಸ್ತೆ ಹಾಗೂ ದಾರಿ ದೀಪಗಳನ್ನು ಸ್ಥಾಪಿಸುವ ಕೆಲಸಗಳು ಪೂರ್ತಿಗೊಂಡಿದೆ. ಇದೀಗ ಹೊಸಂಗಡಿಯಿoದ ಚೆಕ್ಪೋಸ್ಟ್ ಭಾಗದಲ್ಲಿ ಹೆದ್ದಾರಿ ರಸ್ತೆಗೆ ಡಾಮರೀಕರಣ ಬಿರುಸುನಿಂದ ನಡೆಯುತ್ತಿದೆ. ಹೊಸಂಗಡಿ ಪೆಟೇಯಲ್ಲಿ ಈ ಹಿಂದೆ ಭಾರೀ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು, ಆದರೆ ಸೇತುವೆ ಹಾಗೂ ರಸ್ತೆಗಳು ನಿರ್ಮಾಣಗೊಂಡಿರುವುದರಿAದ ವಾಹನಗಳ ದಟ್ಟಣೆಯಿಂದ ಮುಕ್ತಿಹೊಂದಿದೆ. ಉಪ್ಪಳ ಪೇಟೆಯಲ್ಲಿ ಪ್ಲೈ ಒವರ್ ಕಾಮಗಾರಿ ನಡೆಯುವುದರಿಂದ ವಾಹನಗಳ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದ್ದು, ದಿನನಿತ್ಯ ವಾಹನಗಳ ದಟ್ಟಣೆಯಿಂದ ಸಾರ್ವಜನಿಕರು ಸಂಕಷ್ಟಗೊoಡಿದ್ದಾರೆ.


Share with

Leave a Reply

Your email address will not be published. Required fields are marked *