ಇತ್ತೀಚೆಗೆ ಕಾಲು ಊತ ಎಲ್ಲರಲ್ಲೂ ಸಾಮಾನ್ಯವಾಗಿ ಕಾಣಿಸಿಕೊಳ್ಳವ ಸಮಸ್ಯೆ. ಕಾಲೂ ಊತ ಕಾಣಿಸಿಕೊಂಡರೆ ಕೂಡಲೇ ಚಿಕಿತ್ಸೆ ನೀಡಬಾಕು. ಇಲ್ಲವಾದಲ್ಲಿ ಸಮಸ್ಯೆ ಕ್ರಮೇಣ ಹಚ್ಚಾಗುವ ಸಾಧ್ಯತೆ ಇರುತ್ತದೆ. ಕಾಲು ಊತಕ್ಕೆ ಮನೆಯಲ್ಲೆ ಮದ್ದು ಮಾಡಬಹುದು.
1. ಏಟು ಬಿದ್ದಾಗ ಅಥವಾ ಗಾಯಗಳಾಗಿ ಊತ ಬಂದಾಗ ನುಗ್ಗೆಸೊಪ್ಪನ್ನು ಬಾಣಲೆಯನ್ನು ಹಾಕಿ ಹುರಿದು ಬಟ್ಟೆಯಲ್ಲಿ ಹಾಕಿ ಕಟ್ಟಿ ಬಿಸಿಬಿಸಿಯಾಗಿ ಶಾಖ ಕೊಡುವುದರಿಂದ ಊತ, ನೋವೂ ಕಡಿಮೆ ಆಗುತ್ತದೆ.
2. ಎಕ್ಕದ ಎಲೆಗೆ ಹರಳೆಣ್ಣೆ ಸವರಿ ದೀಪದಲ್ಲಿ ಬಿಸಿಮಾಡಿ ಊತವಿರುವ ಜಾಗಕ್ಕೆ ಶಾಖ ಕೊಟ್ಟರೆ ಕಡಿಮೆ ಆಗುತ್ತದೆ.
3. ಎಳ್ಳೆಣ್ಣೆಗೆ ಹುಣಸೆಮರದ ಎಲೆಯನ್ನು ಹಾಕಿ ಚೆನ್ನಾಗಿ ಹುರಿದು ಬಿಸಿ ಸೊಪ್ಪನ್ನು ಒಂದು ಬಟ್ಟೆಗೆ ಹಾಕಿ ಗಂಟುಕಟ್ಟಿ ಊತ ಹಾಗೂ ನೋವು ಇರುವ ಜಾಗಕ್ಕೆ ಸ್ವಲ್ಪ ಶಾಖ ಕೊಡುತ್ತಾ ಬನ್ನಿ, ಊತ ಕಡಿಮೆ ಆಗುತ್ತದೆ.
4. ಬಿಸಿಕೊಬ್ಬರಿ ಎಣ್ಣೆಗೆ ಕರ್ಪೂರವನ್ನು ಪುಡಿಮಾಡಿ ಹಾಕಿ ಊತವಿರುವ ಜಾಗಕ್ಕೆ ಬಿಸಿಬಿಸಿಯಾಗಿ ಹಚ್ಚುತ್ತಾ ಬನ್ನಿ.
5. ಬೇವಿನಚಕ್ಕೆಯನ್ನು ಗಂಧದಂತೆ ತೇಯ್ದು ಊತವಿರುವ ಜಾಗಕ್ಕೆ ಲೇಪಿಸುವುದರಿಂದ ಊತ ಕಡಿಮೆಯಾಗುತ್ತದೆ.
6. ಕುರು ತರಹ ಆಗಿದ್ದರೆ ಹರಳುಗಿಡದ ಎಲೆಯನ್ನು ತಂದು ಹರಳೆಣ್ಣೆ ಸವರಿ ಬಿಸಿಬಿಸಿಯಾಗಿ ರಾಗಿಮಡ್ಡಿಯ ರೀತಿ ಮಾಡಿ. ಇದನ್ನು ಎಲೆಯ ಮೇಲಿಟ್ಟು ಬಿಗಿಯಾಗಿ ಕಟ್ಟಿದರೆ ಕುರು ಬೇಗ ಒಡೆಯುತ್ತದೆ.