ಮೂತ್ರಕೋಶದ ಕೆಲಭಾಗದಲ್ಲಿ ಸೋಂಕು ತಗುಲುವುದರಿಂದ ಉರಿಮೂತ್ರ ಉಂಟಾಗುತ್ತದೆ. ಜೊತೆಗೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾದ್ದಲ್ಲಿ ಉರಿಮೂತ್ರ ಉಂಟಾಗುತ್ತದೆ. ಸಾಮಾನ್ಯವಾಗಿ ಉರಿಮೂತ್ರ ಸಮಸ್ಯೆ ನಿಜಕ್ಕೂ ಹೇಳಬೇಕೆಂದರೆ ಒಂದು ಗಂಭೀರ ಸಮಸ್ಯೆಯಲ್ಲ ಆದರೆ ರೋಗಿಗಳಿಗೆ ಆಗುವ ಅಹಿತಕರ ಭಾವನೆ ಮತ್ತು ಯಾವುದೇ ಚಿಕಿತ್ಸೆ ಪಡೆಯದ ಕಾರಣದಿಂದಾಗಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತವೆ.
ಹೆಚ್ಚು ನೀರು ಕುಡಿಯುವುದರಿಂದ ಉರಿಮೂತ್ರ ಉಂಟಾಗದಂತೆ ತಡೆಯಬಹುದು. ನಿರಂತರ ಉರಿಮೂತ್ರ ಸಮಸ್ಯೆ ಕಾಡುತ್ತಿದೆಯಾದರೆ ಪ್ರತಿದಿನ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ, ಎಳನೀರು ಕುಡಿಯುವುದರಿಂದ ಉರಿಮೂತ್ರವನ್ನು ಹೋಗಲಾಡಿಸಬಹುದು.
ಆಹಾರ ಸೇವಿಸಿದ ಬಳಿಕ ಸೋರೆಕಾಯಿ ರಸಕ್ಕೆ ನಿಂಬೆಹಣ್ಣಿನ ರಸ ಸೇರಿಸಿ ಕುಡಿಯುವುದರಿಂದ ಸಹ ಉರಿಮೂತ್ರ ಸಮಸ್ಯೆ ನಿವಾರಿಸಬಹುದು. ಅಲ್ಲದೆ, ತಿಳಿ ಮಜ್ಜಿಗೆಗೆ ನಿಂಬೆ ರಸ ಹಾಗೂ ಕಲ್ಲು ಸಕ್ಕರೆ ಬೆರೆಸಿ ಪ್ರತಿನಿತ್ಯ ಕುಡಿಯುವುದರಿಂದ ಉರಿಮೂತ್ರ ಸಮಸ್ಯೆಯನ್ನು ಹೋಗಲಾಡಿಸಬಹುದು.