ಮೂಸೋಡಿ ರಸ್ತೆಯಲ್ಲಿ ವಿದ್ಯುತ್ ತಂತಿ ಮೇಲೆ ಭಾಗಿದ ಬೃಹತ್ ಮರಗಳು: ಸ್ಥಳೀಯರಲ್ಲಿ ಭೀತಿ

Share with


ಉಪ್ಪಳ: ರಸ್ತೆ ಬದಿಯಲ್ಲಿರುವ ಮರದ ರೆಂಬೆಗಳು ವಿದ್ಯುತ್ ತಂತಿ ಮೇಲೆ ಯಾವುದೇ ಕ್ಶಣದಲ್ಲಿ ಮುರಿದು ಬೀಳುವ ಆತಂಕ ಸ್ಥಳೀಯರನ್ನು ಕಾಡುತ್ತಿದೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಉಪ್ಪಳ ರೈಲ್ವೇ ಗೇಟ್ ಮೂಲಕ ಹಾದುಹೋಗುವ ಮೂಸೋಡಿ ರಸ್ತೆಯಲ್ಲಿ ಅಪಾಯಕಾರಿ ಮರಗಳು ಆತಂಕ ಸೃಷ್ಟಿಯಾಗಿದೆ.

ಈ ಪರಿಸರದಲ್ಲಿ ಬೃಹತ್ ಮರಗಳು, ತೆಂಗಿನ ಮರಗಳು ವಿದ್ಯುತ್ ತಂತಿ ಮೇಲೆ ಭಾಗಿಕೊಂಡಿದೆ. ಭಾರೀ ಪ್ರಮಾಣದಲ್ಲಿ ಪ್ರಮುಖ ವಿದ್ಯುತ್ ತಂತಿಗಳು ಅಡ್ಡ ದಿಡ್ಡಿಯಾಗಿ ಮನೆಗಳಿಗೆ ವ್ಯಾಪಾರ ಸಂಸ್ಥೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಮರಗಳ ರೆಂಬೆಗಳು ಮಳೆ ಗಾಲದಲ್ಲಿ ಯಾವುದೇ ಕ್ಷಣದಲ್ಲಿ ಮುರಿದು ಬಿದ್ದರೆ ಹಲವು ಕಂಬಗಳು, ತಂತಿ ಧಾರಶಾಹಿಗೊಂಡು ದುರಂತ ಸಂಭವಿಸಬುಹುದಾಗಿದೆ. ಈ ರಸ್ತೆಯಿಂದ ಮೂಸೋಡಿ, ಹಾರ್‌ಬಾರ್, ಮಣಿಮುಂಡ, ಶಾರದಾನಗರ ಸಹಿತ ಹಲವು ಪ್ರದೇಶಗಳಿಗೆ ನೂರಾರು ವಾಹನ ಸಂಚಾರ ಸಹಿತ ನಡೆದುಹೋಗುವವರು ಭಯಭೀತರಾಗುತ್ತಿದ್ದಾರೆ. ಮಳೆ ಗಾಳಿಗೆ ಪದೇ ಪದೇ ತಂತಿ ಮೇಲೆ ಸಣ್ಣಪುಟ್ಟ ರೆಂಬೆಗಳು ಬೀಳುವುದು ಸಾಮಾನ್ಯವಾಗಿರುವುದಾಗಿ ದೂರಲಾಗಿದೆ. ಸಂಬoಧಪಟ್ಟ ವಿದ್ಯುತ್ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಿ ವಿದ್ಯುತ್ ತಂತಿ ಮೇಲೆ ಹಾದುಹೋದ ಮರದ ರೆಂಬೆಗಳನ್ನು ಕಡಿದು ಉಂಟಾಗುವ ಅನಾಹುತವನ್ನು ತಪ್ಪಿಸಬೇಕೆಂದು ಊರವರು ಆಗ್ರಹಿಸಿದ್ದಾರೆ.


Share with

Leave a Reply

Your email address will not be published. Required fields are marked *