ಕೇಂದ್ರ ಬಜೆಟ್ ನಲ್ಲಿ ಕೇರಳ ರಾಜ್ಯದ ಅವಗಣನೆ: ಯುವ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ

Share with

ಮಂಜೇಶ್ವರ : ಕೇಂದ್ರ ಸರಕಾರದ ಬಜೆಟಿನಲ್ಲಿ ಕೇರಳ ರಾಜ್ಯವನ್ನು ಸಂಪೂರ್ಣ ನಿರ್ಲಕ್ಷಿಸಿದ್ದನ್ನು ಖಂಡಿಸಿ ಯೂತ್ ಕಾಂಗ್ರೆಸ್ ಮಿಂಜ ಹಾಗೂ ವರ್ಕಾಡಿ ಮಂಡಲ ಸಮಿತಿ ವತಿಯಿಂದ ಅಂಚೆ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಮೀಯಪದವು ಅಂಚೆ ಕಛೇರಿಯಲ್ಲಿ ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಿಗೆ ಕೇರಳದ ಭೂಪಟವನ್ನು ಕಳುಹಿಸಿಕೊಡುವ ಮೂಲಕ ಪ್ರತಿಭಟನೆ ಮಾಡಲಾಯಿತು. ಮೀಂಜ ಮಂಡಲ ಯೂತ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಾತಿಷ್ ಅಹ್ಮದ್ ರವರ ಅಧ್ಯಕ್ಷತೆಯಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತು ಮಾಜೀ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಗದೀಶ್ ಮೂಡಂಬೈಲು ಪ್ರಾಸ್ತಾವಿಕ ಭಾಷಣಗೈದು, ಸ್ವಾಗತಿಸಿದರು. ನೇತಾರರಾದ ಬಿ.ಕೆ.ಮೊಹಮ್ಮದ್, ಜಿ.ರಾಮ್ ಭಟ್, ಹಮೀದ್ ಕಣಿಯೂರು, ಕಾಯಿಂಞ ಹಾಜೀ ತಲೇಕಳ, ಜೆ.ಮೊಹಮ್ಮದ್, ಸಿರಾಜುದ್ದಿನ್ ತಂಙಳ್, ಅಬೂಬಕ್ಕರ್ ಪೊಯ್ಯೆ, ಡೆನ್ನಿಸ್ ಡಿ.ಸೋಜ, ಉಮ್ಮರ್ ಬೆಜ್ಜ, ಶೇಕ್ ಅಬ್ಬಾಸ್, ಅಬೂಸಾಲಿ, ಬಶೀರ್ ಬೆಜ್ಜ, ಜಿಯಾ, ಇರ್ಫಾನ್ ಕಣಿಯೂರ್, ಅಶ್ಫಲ್ ಮುಂತಾದವರು ಉಪಸ್ಥಿತರಿದ್ದರು.


ವರ್ಕಾಡಿ ಅಂಚೆ ಕಛೇರಿ ಮುಂಭಾಗದಲ್ಲಿ ಜರುಗಿದ ಪ್ರತಿಭಟನೆಯಲ್ಲಿ ವರ್ಕಾಡಿ ಮಂಡಲ ಯೂತ್ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಶ್ರಿಮತಿ ಶರ್ಮಿಳಾ ಪಿಂಟೋ ರವರ ಅಧ್ಯಕ್ಷತೆಯಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯೆ ಕಮಲಾಕ್ಷಿ.ಕೆ ಉದ್ಘಾಟಿಸಿದರು. ಯೂತ್ ಕಾಂಗ್ರೆಸ್ ಅಸೆಂಬ್ಲಿ ಪ್ರಧಾನ ಕಾರ್ಯದರ್ಶಿ ಅಬೂಸಾಲಿ ಗಾಂಧೀನಗರ ಸ್ವಾಗತಿಸಿದರು. ನೇತಾರರಾದ ಮೊಹಮ್ಮದ್ ಮಜಾಲ್, ಎಸ್.ಅಬ್ದುಲ್ ಖಾದರ್ ಹಾಜೀ, ಸದಾಶಿವ.ಕೆ, ಶೈಲಜಾ ಕಳಿಯೂರು, ವಿನೋದ್ ಕುಮಾರ್, ರಜತ್ ವೇಗಸ್, ಬಿ.ಕೆ.ಮೊಹಮ್ಮದ್, ರಾಬಿಯಾ ವರ್ಕಾಡಿ, ಫಿಲೋಮಿನಾ ಮೊಂತೇರೋ, ರಾಜೇಶ್ ಡಿ.ಸೋಜ, ಸಹದ್ ಅಬ್ದುಲ್ ಖಾದರ್, ಶಕೀಲ್ ಅಹ್ಮದ್ ಮುಂತಾದವರು ಉಪಸ್ಥಿತರಿದ್ದರು.


Share with