ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ (Rajinikanth) ಅವರ ʼಕೂಲಿʼ (Coolie) ದಿನಕಳೆದಂತೆ ಒಂದೊಂದೇ ಅಪ್ಡೇಟ್ ಗಳನ್ನು ನೀಡುತ್ತಾ ಬರುತ್ತಿದೆ. ಆ ಮೂಲಕ ರಿಲೀಸ್‌ಗೂ ಸಖತ್ ಕ್ರೇಜ್ ಹೆಚ್ಚಿಸಿದೆ.
ಸೂಪರ್ ಸ್ಟಾರ್ ರಜಿನಿಕಾಂತ್ – ಲೋಕೇಶ್ ಕನಕರಾಜ್ ( Lokesh Kanagaraj) ಅವರ ʼಕೂಲಿʼ ಕಾಲಿವುಡ್ ನಲ್ಲಿ ಶೂಟಿಂಗ್ ಹಂತದಲ್ಲೇ ಜೋರಾಗಿ ಸದ್ದು ಮಾಡುತ್ತಿದೆ. ಪಾತ್ರ ವರ್ಗದ ಬಗ್ಗೆ ದಿನಕಳೆದಂತೆ ಲೇಟೆಸ್ಟ್ ಅಪ್ಡೇಟ್ ಗಳು ಹೊರಬೀಳುತ್ತಿದೆ.
ಇತ್ತೀಚೆಗೆ ಸ್ಯಾಂಡಲ್‌ವುಡ್ ಉಪೇಂದ್ರ(Upendra) ಅವರು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಸುದ್ದಿಯಾಗಿತ್ತು. ಇದಲ್ಲದೆ ಮಾಲಿವುಡ್ ನಟ ಸೌಬಿನ್ ಶಾಹಿರ್ (Soubin Shahir) ಅವರ ʼದಯಾಳ್ʼ ಪಾತ್ರದ ಲುಕ್ ರಿವೀಲ್ ಆಗಿತ್ತು.
ಇದೀಗ ತೆಲುಗು ನಟ ನಾಗಾರ್ಜುನ್ (Akkineni Nagarjuna) ಅವರು ʼಕೂಲಿʼಯ ಭಾಗವಾಗಿರುವುದು ಅಧಿಕೃತವಾಗಿದೆ. ಅವರ ಹುಟ್ಟುಹಬ್ಬದಂದೇ ಪಾತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ.