ಉಪ್ಪಳ: ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಜಿಲ್ಲಾ ಮಟ್ಟದ ಚುನಾವಣಾ ಗ್ರಾಮಸಭಾ ಕಾರ್ಯಾಕ್ರಮ ಮಾ.2ರಂದು ಶಿರಿಯ ಹೈಯರ್ ಸೆಕಂಡರಿ ಶಾಲೆಯಲ್ಲಿ ನಡೆಯಿತು.
ಕಾಸರಗೋಡು ಜಿಲ್ಲಾಧಿಕಾರಿ ಕೆ.ಇಂಬಶೇಖರ್.ಐ.ಎ.ಎಸ್ ಉದ್ಘಾಟಿಸಿದರು. ಬಿ.ಎಲ್.ಒ ರೇವತಿ ಟೀಚರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಮಾಡುವ ಅವಕಾಶ ಈ ಚುನಾವಣಾ ಗ್ರಾಮಸಭೆಯಲ್ಲಿ ನಡೆಸಲಾಗುತ್ತಿದೆ. ಮಂಜೇಶ್ವರ ತಶೀಲ್ದಾರ್ ಶಿಬು.ಪಿ ಸ್ವಾಗತ ಭಾಷಣ ಮಾಡಿದರು. ಪಂಚಾಯತ್ ಸದಸ್ಯರಾದ ಬೀಬಿ, ಕೈರುನ್ನೀಸ, ಬಿ.ಎಲ್.ಒಗಳಾದ ಅಬ್ದುಲ್ಲ, ಅಬ್ದುಲ್ ನಾಸಿರ್, ಪ್ರಮೀಳ ಟೀಚರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮತದಾರರು ಭಾಗವಹಿಸಿದರು.