ಮಂಜೇಶ್ವರ: ಮೀಂಜ ಪಂಚಾಯತ್‌ನ 6ನೇ ವಾರ್ಡಿನಲ್ಲಿ ಬ್ಲೋಕ್ ಪಂಚಾಯತ್ ಪಂಡ್ ನಿಂದ ನಿರ್ಮಿಸಲಾದ ನೂತನ ಎರಡು ಡಾಮಾರೀಕರಣ ರಸ್ತೆಗಳ ಉದ್ಘಾಟನಾ ಸಮಾರಂಭ ಮಾ.9ರಂದು ಕಲ್ಲಗದ್ದೆ ಮೃತ್ಯುಂಜಯ ಯುವಕ ವೃಂದದ ಕಟ್ಟಡದಲ್ಲಿ ನಡೆಯಿತು.
ತೊಟ್ಟೆತ್ತೊಡಿ- ಕಲ್ಲಗದ್ದೆ ಬುಡ್ರಿಯ ಶ್ರೀ ಮಲರಾಯ ಬಂಟ ದೈವಸ್ಥಾನ ರಸ್ತೆ ಮತ್ತು ಕೆದುವಾರ್ ಕಲ್ಲಗದ್ದೆ ಅಮ್ಮೆನಡ್ಕದ ನೂತನ ರಸ್ತೆ ಡಾಮಾರೀಕರಣಗೊಂಡಿದೆ. ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷೆಶಮೀನ ಟೀಚರ್ ಉದ್ಘಾಟಿಸಿದರು.
ಬಳಿಕ ಅಭಿನಂದನಾ ಕಾರ್ಯಕ್ರಮ ನಡೆಯಿತು. ಬ್ಲೋಕ್ ಉಪಾಧ್ಯಕ್ಷ ಮೊಹಮ್ಮದ್ ಹನೀಪ್, ಬ್ಲೋಕ್ ಸದಸ್ಯರಾದ ಕೆ. ವಿ. ರಾಧಾಕೃಷ್ಣ ಭಟ್, ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಹಾಗೂ ಗ್ರಾಮದ ಎಲ್ಲಾ ಬಂಧು ಮಿತ್ರರು, ಮಾತೆಯರು, ಮತ್ತು ಮಕ್ಕಳು ಭಾಗವಹಿಸಿದರು. ಅಶ್ವಿನ್ ಕುಮಾರ್ ಕಲ್ಲಗದ್ದೆ ಸ್ವಾಗತಿಸಿ, ಶಿವಾನಂದ ಕಲ್ಲಗದ್ದೆ ವಂದಿಸಿದರು.