ಶಾಂತಿಗೊಡು ನವಚೇತನ ಹಿರಿಯ ನಾಗರಿಕರ ಬಡಾವಣೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Share with

ಪುತ್ತೂರು: ಶಾಂತಿಗೊಡು ನವಚೇತನ ಹಿರಿಯ ನಾಗರಿಕರ ಬಡಾವಣೆಯಲ್ಲಿ ಆ.15 ರಂದು 77ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕರ್ನಾಟಕ ಸರಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನಿಯರ್ ಆಗಿ ನಿವೃತ್ತ ಜೀವನ ನಡೆಸುತ್ತಿರುವ ಮುದ್ರಾಜೆ ಗೋವಿಂದ ಭಟ್ ಅವರು ಧ್ವಜಾರೋಹಣವನ್ನು ನೆರವೇರಿಸಿ ದೇಶಕ್ಕಾಗಿ ಬಲಿದಾನಗೈದ ಹಿರಿಯರನ್ನು ನೆನಪಿಸಿಕೊಂಡು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ನಿವೃತ್ತ ಮ್ಯಾನೇಜರ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ವಿಶ್ವನಾಥ ಭಟ್ ಅವರು ಮಾತನಾಡಿ ತಿರುಚಿದ ಇತಿಹಾಸವನ್ನು ಓದಿ ಬೆಳೆದ ನಾವು ಇನ್ನು ಕೂಡ ನಿಜವಾದ ಸ್ವಾತಂತ್ರ್ಯವನ್ನು ಪಡೆಯುವಲ್ಲಿ ಸೋತಿದ್ದೇವೆ, ನಾವು ಈಗ ಓದಿ ಕೇಳುತ್ತಿರುವ ಕೆಲವೇ ಮಹನೀಯರಲ್ಲದೆ ಅದೆಷ್ಟೋ ಮಂದಿ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನೇ ಬಲಿ ಕೊಟ್ಟಿದ್ದಾರೆ, ಮತ್ತು ಅವರೆಲ್ಲರನ್ನು ಸ್ಮರಿಸಬೇಕಾದುದು ನಮ್ಮ ಕರ್ತವ್ಯ ಎಂದು ಹೇಳುತ್ತಾ ಶುಭ ಹಾರೈಸಿದರು.

ನಂತರ ದೇಶಭಕ್ತಿ ಗೀತೆ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಈ ಕಾರ್ಯಕ್ರಮ ಆರಂಭ ಆಗುವ ಮೊದಲು ಇತ್ತೀಚೆಗೆ ಅಕಾಲಿಕವಾಗಿ ನಮ್ಮನ್ನಗಲಿದ ನವಚೇತನದ ಹಿರಿಯರಾದ ರಾಮಕೃಷ್ಣ ಭಟ್ ಮಿತ್ತೂರು,ಲಲಿತಾ ಭಟ್ ಬೆಳಗಜೆ ಹಾಗೂ ಬಬ್ಲಿ ಕೃಷ್ಣ ಭಟ್ ಅವರನ್ನು ನೆನಪಿಸಿ,ಅವರ ಸ್ಮರಣಾರ್ಥ ಮೌನ ಪ್ರಾರ್ಥನೆಯ ಶ್ರದ್ಧಾಂಜಲಿ ಕೋರಲಾಯಿತು.

ನವಚೇತನದ ಸಿಬ್ಬಂದಿವರ್ಗ ಹಾಗೂ ನಿವಾಸಿಗಳೆಲ್ಲರು ಈ ಶುಭ ಸಂಧರ್ಭದಲ್ಲಿ ಹಾಜರಿದ್ದು ಕಾರ್ಯಕ್ರಮವನ್ನು ಅವಿಸ್ಮರಣೀಯ ಗೊಳಿಸಿದರು.


Share with

Leave a Reply

Your email address will not be published. Required fields are marked *