ಲಘು ಭೂಕಂಪ: ಜನರಲ್ಲಿ ಆತಂಕ!!

Share with

ಮಹಾರಾಷ್ಟ್ರ: ಕೊಲ್ಹಾಪುರದಲ್ಲಿ ಲಘು ಭೂಕಂಪ ಸಂಭವಿಸಿದ್ದು, 3.4 ತೀವ್ರತೆ ದಾಖಲಾಗಿದೆ. ಬೆಳಗ್ಗೆ 6.45ಕ್ಕೆ 5 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ತಕ್ಷಣದ ವರದಿಗಳಿಲ್ಲ.

ಕೊಲ್ಹಾಪುರವು ಪಶ್ಚಿಮ ಮಹಾರಾಷ್ಟ್ರದಲ್ಲಿದ್ದು, ಮುಂಬೈನಿಂದ ಸುಮಾರು 375 ಕಿಮೀ ದೂರದಲ್ಲಿದೆ. ಈ ನಡುವೆ ಸತಾರಾ ಜಿಲ್ಲೆಯ ಪಟಾನ್ ನಗರ ಸೇರಿದಂತೆ ಸಮೀಪದ ಗ್ರಾಮಗಳಲ್ಲಿ ಭೂಕಂಪನದ ಅನುಭವವಾಗಿದೆ. ಬೆಳಗ್ಗೆ 6.40ಕ್ಕೆ ಭೂಕಂಪ ಸಂಭವಿಸಿದೆ.ಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದ ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಯಿತು. ಕೊಯ್ನಾ ಅಣೆಕಟ್ಟಿನಿಂದ 20 ಕಿ.ಮೀ ದೂರದಲ್ಲಿ ಭೂಕಂಪನದ ಅನುಭವವಾಗಿದ್ದು, ಅಣೆಕಟ್ಟು ಸುರಕ್ಷಿತವಾಗಿದೆ. ಭೂಕಂಪದಿಂದ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.


Share with

Leave a Reply

Your email address will not be published. Required fields are marked *