ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿರುದ್ಧಿ ಯೋಜನೆ ಯ ಬಂಟ್ವಾಳ ವಲಯದ ನಾವೂರು A ಕಾರ್ಯಕ್ಷೇತ್ರದ ಸ. ಮಾ. ಹಿ. ಪ್ರಾ. ಶಾಲೆ ನಾವೂರು ಇಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ಹಾಗೂ ಗಿಡ ನೆಡುವ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷರಾಗಿ ನಾವೂರು A ಒಕ್ಕೂಟದ ಅಧ್ಯಕ್ಷ ರಾದ ಸಂತೋಷ್ ರವರು ವಹಿಸಿದ್ದರು, ಕಾರ್ಯಕ್ರಮ ದ ಉದ್ಘಾಟನೆ ಯನ್ನು ಮಾತೃಭೂಮಿ ಸೇವಾ ಸಂಘದ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್ ರವರು ನೆರವೇರಿಸಿ ಶುಭಾಶಯಗಳು ಹಾರೈಸಿದರು. ತಾಲ್ಲೂಕು ಕೃಷಿ ಅಧಿಕಾರಿ ಜಯರಾಮ ಶೆಟ್ಟಿ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು, ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಸುನೀತಾ ರವರು ಮಕ್ಕಳಿಗೆ ಸೂಕ್ತ ಸಲಹೆ ಸೂಚನೆ ಗಳನ್ನು ನೀಡಿದರು, ಮಕ್ಕಳಿಗೆ ಪರಿಸರ ಗೀತೆ, ಎಲೆ ಗುರುತಿಸುವುದು, ಚಿತ್ರ ಬಿಡಿಸುವುದು, ಸ್ಪರ್ಧೆ ಏರ್ಪಡಿಸಲಾಗಿದ್ದು ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಶ್ರೀಮತಿ ತ್ರಿವೇಣಿ, ಒಕ್ಕೂಟದ ಮಾಜಿ ಅಧ್ಯಕ್ಷರು, ಸದಸ್ಯರು, ಶೌರ್ಯ ತಂಡದ ಸದಸ್ಯರು, ಶಿಕ್ಷಕರ ವೃಂದ, ಶಾಲಾ ಮಕ್ಕಳು, ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು,ಈ ಸಂದರ್ಭದಲ್ಲಿ ಗಿಡ ನೆಟ್ಟು ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು.