ಉಡುಪಿಯಲ್ಲಿ ಖಜಕಿಸ್ತಾನದ ಮಹಿಳೆಯ ಅಂತ್ಯಸಂಸ್ಕಾರ

Share with

ಉಡುಪಿ: ಖಜಕಿಸ್ತಾನ ದೇಶದ ಮಹಿಳೆಯೊಬ್ಬರ ಅಂತ್ಯಸಂಸ್ಕಾರವು ಉನ್ನತ ಮಟ್ಟದ ಕಾನೂನು ಪ್ರಕ್ರಿಯೆಗಳು ನಡೆದ ಬಳಿಕ, ಕ್ರಿಶ್ಚನ್ ಧರ್ಮಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳ ಮೂಲಕ ಉಡುಪಿಯ ಸಿ.ಎಸ್.ಐ ಚರ್ಚಿನ ದಫನ ಭೂಮಿಯಲ್ಲಿ ನಡೆಯಿತು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದೊಂದಿಗೆ ನಗರ ಪೋಲಿಸ್ ಠಾಣೆಯ ಎಸ್ ಐ ಪುನೀತ್ ಕುಮಾರ್, ತನಿಖಾ ಸಹಾಯಕಿ ಸುಷ್ಮಾ, ಹಾಗೂ ಠಾಣೆಯ ಸಿಬ್ಬಂದಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದರು. ಅಂತ್ಯಸಂಸ್ಕಾರ ವಿಧಿವಿಧಾನಗಳನ್ನು ಸಭಾಪಾಲಕ ರೆವೆ ಜೋಸ್ ಬೆನೆಡಿಕ್ಟ್ ಅಮ್ಮನ್ನ ನೇರವೆರಿಸಿದರು. ವಿಶ್ರಾಂತ ಸಭಾಪಾಲಕ ರೆವೆ ಐಸನ್ ಸುಕುಮಾರ ಪಾಲನ್ನ, ಪಾಸ್ಟರ್ ಅಬ್ರಹಾಂ, ಪಾಸ್ಟರ್ ಜೋಯ್ಸ್ ಕುರಿಯ ಕೋನ್, ಸಮಾಜಸೇವಕ ನಿತ್ಯಾನಂದ ಒಳಕಾಡು, ಉಡುಪಿ ಚರ್ಚಿನ ಸದಸ್ಯರು ಭಾಗಿಯಾಗಿದ್ದರು.
ಮೃತ ಮಹಿಳೆ ಖಜಕಿಸ್ತಾನದ ಸುಲ್ತಾನೆಟ್ ಬೆಕ್ಟೆನೋವಾ ಅವರಿಗೆ ಉಡುಪಿಯ ನಿವಾಸಿ ದಿ. ಕುಲಿನ್ ಮಹೇಂದ್ರ ಷಾ ಅವರೊಂದಿಗೆ 2009ರಲ್ಲಿ ಮಣಿಪಾಲದ ಸಿ.ಎನ್.ಐ ಚರ್ಚಿನಲ್ಲಿ ವಿವಾಹವಾಗಿತ್ತು. ಉಡುಪಿಯ ಪುತ್ತೂರಿನಲ್ಲಿ ಬಾಡಿಗೆ ಮನೆಮಾಡಿಕೊಂಡು 13 ವರ್ಷದ ರೆಬೆಕಾ ಕುಲಿನ್ ಷಾ ಮಗಳೊಂದಿಗೆ ವಾಸವಾಗಿದ್ದರು. ಮೇ 7ರಂದು ಸುಲ್ತಾನೆಟ್ ಬೆಕ್ಟೆನೋವಾ (51) ಅವರು ಸ್ನಾನದ ಕೊಠಡಿಯಲ್ಲಿ ಕುಸಿದುಬಿದ್ದಿದ್ದರು. ಮಾಹಿತಿ ತಿಳಿದ ಸಮಾಜಸೇವಕ ನಿತ್ಯಾನಂದ ಒಳಕಾಡುವರು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಪರೀಕ್ಷಿಸಿದ ವೈದ್ಯರು ಮಹಿಳೆ ಮೃತಪಟ್ಟಿರುವುದನ್ನು ಧೃಡಿಕರಿಸಿದ್ದರು. ಶವವನ್ನು ಜಿಲ್ಲಾಸ್ಪತ್ರೆಯ ಶೀತಲೀಕೃತ ಶವಾಗಾರದಲ್ಲಿ ರಕ್ಷಿಸಿಡಲಾಗಿತ್ತು. ಘಟನೆ ಬಗ್ಗೆ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿದೇಶಿ ಮಹಿಳೆಯ ವಾರಸುದಾರರ ಪತ್ತೆಕಾರ್ಯವನ್ನು ನಗರ ಠಾಣೆಯ ಪೋಲಿಸರು ಭಾರತದ ರಾಯಭಾರಿ ಕಚೇರಿಯ ಸಹಕಾರದಿಂದ ಪತ್ತೆಗೊಳಿಸಿ ಯಶಸ್ವಿಯಾಗಿದ್ದರು. ವಿಷಯ ತಿಳಿದ ಮೃತ ಮಹಿಳೆಯ ಮಗ ಶವ ಪಡೆಯಲು ಭಾರತಕ್ಕೆ ಬರಲು ಅಸಹಾಯಕ ಸ್ಥಿತಿ ಎದುರಾದ್ದರಿಂದ, ಅಂತ್ಯಸಂಸ್ಕಾರ ನಡೆಸಲು ರಾಯಭಾರಿ ಕಚೇರಿಯ ಮೂಲಕ, ಮಣಿಪಾಲದ ಸಿ.ಎಸ್.ಐ ಚರ್ಚಿಗೆ ನಡೆಸುವಂತೆ ವಿನಂತಿಯನ್ನು ಈಮೇಲ್ ಮೂಲಕ ರವಾನಿಸಲಾಗಿತ್ತು


Share with

Leave a Reply

Your email address will not be published. Required fields are marked *