ಸಂಪೂರ್ಣ ಸುರಕ್ಷಾ ಚೆಕ್ ವಿತರಣೆ

Share with

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯದ ಬೋಳಂತೂರು ಒಕ್ಕೂಟದ ಧರ್ಮನಿಧಿ ಒಕ್ಕೂಟದ ಸದಸ್ಯೆ ಸೀತಾ ಅವರ ಪತಿ ರಾಮಚಂದ್ರ ಆಚಾರ್ಯರವರ ವೈದ್ಯಕೀಯ ಚಿಕಿತ್ಸೆಗೆ ಯೋಜನೆಯ ಸಂಪೂರ್ಣ ಸುರಕ್ಷಾ ಕಾರ್ಯಕ್ರಮದ ಅಡಿಯಲ್ಲಿ ರೂ 85,000 /- ಮಂಜುರಾಗಿದ್ದು ಅದರ ಚೆಕ್ಕನ್ನು ವಿಟ್ಲ ತಾಲೂಕು ಯೋಜನಾಧಿಕಾರಿ ರಮೇಶ್ ರವರು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ವಿಟ್ಲ ಯೋಜನಾ ಕಚೇರಿಯ ಆಡಳಿತ ಪ್ರಬಂಧಕರಾದ ವಾಣಿ, ಹಣಕಾಸು ಪ್ರಬಂಧಕರಾದ ರತ್ನಾವತಿ. ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *