ಪೈವಳಿಕೆ: ಹದಗಗೆಟ್ಟು ಶೋಚನೀಯವಸ್ಥೆಗೆ ತಲುಪಿದ ರಸ್ತೆಯಲ್ಲಿ ವಾಹನ ಸಂಚಾರ ದುಸ್ಥರಗೊಂಡು ಸಾರ್ವಜನಿಕರು ತೀರಾ ಸಂಕಷ್ಟವನ್ನು ಪಡುತ್ತಿದ್ದರೂ ರಸ್ತೆ ದುರಸ್ಥಿಗೆ ಅಧಿಕಾರಿಗಳು ನಿರ್ಲಕ್ಷ÷್ಯ ವಹಿಸುತ್ತಿರುವುದಾಗಿ ಊರವರು ಆರೋಪಿಸಿದ್ದಾರೆ. ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಲೋಕೋಪಯೋಗಿ ಇಲಾಖೆಯ ಮಾಸಿಕುಮೇರಿ-ಕುರುಡಪದವು ರಸ್ತೆಯಲ್ಲಿ ಸಂಚಾರ ಆತಂಕದ ಸ್ಥಿತಿಗೆ ತಲುಪಿದೆ. ಮಾಸಿಕುಮೇರಿ [ಲಾಲ್‌ಭಾಗ]ನಿಂದ ಕುರುಡಪದವು ಸುಮಾರು ೮ ಕಿಲೋ ಮೀಟರ್ ರಸ್ತೆ ಅಲ್ಲಲ್ಲಿ ಹದಗೆಟ್ಟು ಶೋಚನೀಯವಸ್ಥೆಗೆ ತಲುಪಿದೆ. ಅಲ್ಲದೆ ಹಲವು ತಿರುವುಗಳು, ಇಕ್ಕಟ್ಟಾದ ರಸ್ತೆಇದಾಗಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.
ಕರ್ನಾಟಕಕ್ಕೂ ಸಂಪರ್ಕಿಸುವ ರಸ್ತೆ ಇದಾಗಿದ್ದು, ಬಸ್, ಶಾಲಾ ವಾಹನ ಸಹಿತ ದಿನನಿತ್ಯ ನೂರಾರು ವಾಹನಗಳು ಸಂಚರಿಸುವ ರಸ್ತೆ ಇದಾಗಿದೆ. ಹಲವು ವರ್ಷಗಳಿಂದ ಈ ರಸ್ತೆಯ ದುರಸ್ಥಿಗೆ ಊರವರು ಒತ್ತಾಯಿಸುತ್ತಲೇ ಇದ್ದರೂ ಅಧಿಕಾರಿಗಳ ವರ್ಗ ಗಮನ ಹರಿಸುತ್ತಿಲ್ಲವೆನ್ನಲಾಗಿದೆ. ಪಂಚಾಯತ್‌ನ ನಾಲ್ಕು ವಾರ್ಡ್ಗಳನ್ನು ಸಂಗಮಿಸುವ ಈ ಪ್ರದೇಷದಲ್ಲಿ ಹಲವಾರು ವಿವಿಧ ರಾಜಕೀಯ ನೇತಾರರು ಇದ್ದರೂ ರಸ್ತೆ ಅಭಿವೃದ್ದಿಗೋಸ್ಕರ ಶ್ರಮಿಸುತ್ತಿಲ್ಲವೆಂದು ಊರವರು ಆರೋಪಿಸಿದ್ದಾರೆ. ಈ ರಸ್ತೆ ಮರು ಡಾಮರೀಕರಣಗೊಳಿಸಲು ನಾಲ್ಕೂವರೆ ಕೋಟಿ ರೂ ಮಂಜೂರುಗೊAಡಿರುವುದಾಗಿ ಇಲಾಖೆ ಅಧಿಕಾರಿಗಳು ಹಲವು ತಿಂಗಳ ಹಿಂದೆ ಊರವರು ಪೋನ್ ಕರೆ ಮಾಡುವ ವೇಳೆ ತಿಳೀಸಿದೆನ್ನಲಾಗಿದೆ. ಆದರೆ ಇದುವರೆಗೂ ದುರಸ್ಥಿಗೆ ಕ್ರಮಯಿಲ್ಲ.
ಇನ್ನೂ ಚುನಾವಣೆ ಆದೇಶ ಬಂದಲ್ಲಿ ಮತ್ತೆ ವಿಳಂಬಗೊಳ್ಳಲಿದೆ. ಮಳೆಗಾಲಕ್ಕೂ ಮುನ್ನ ರಸ್ತೆ ದುರಸ್ಥಿಗೊಳ್ಳದಿದ್ದಲ್ಲಿ ವಾಹನ ಸಂಚಾರ ನರಕಯಾತನೆಗೊಳ್ಳಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶೀಘ್ರವಾಗಿ ದುರಸ್ಥಿಗೆ ಕ್ರಮಕೈಗೊಳ್ಳದಿದ್ದಲ್ಲಿ ಹೋರಾಟಕ್ಕೆ ಮುಂದಾಗುವುದಾಗಿ ನಾಗರಿಕರು ಎಚ್ಚರಿಕೆ ನೀಡಿದ್ದಾರೆ. ಈ ರೂಟಿನಲ್ಲಿ ಬಸ್ ಸಂಚಾರ ಮೊಟಕುಗೊಳಿಸಲು ಸಿಬ್ಬಂದಿಗಳು ಹಾಗೂ ಮಾಲಕರು ನಿರ್ಧಾರ ಕೈಗೊಳ್ಳಲಿದ್ದಾರೆ.