ಮಂಜೇಶ್ವರ: ಮೀನು ಕಾರ್ಮಿಕ ನಿಗೂಡವಾಗಿ ನಾಪತ್ತೆಯಾಗಿ 3 ತಿಂಗಳು ಕಳೆದರೂ ಇನ್ನೂ ಮಾಹಿತಿ ಅಲಭ್ಯ; ಆತಂಕದಲ್ಲಿ ಕುಟುಂಬ

Share with

ಮಂಜೇಶ್ವರ: ಮೀನು ಕಾರ್ಮಿಕ ಮನೆಯಿಂದ ನಿಗೂಡವಾಗಿ ನಾಪತ್ತೆಗೊಂಡು ಇಂದಿಗೆ 3 ತಿಂಗಳು, 18ದಿನ ಕಳೆದರೂ ಇನ್ನೂ ನಾಪತ್ತೆಯಾಗದಿರುವುದು ಕುಟುಂಬ ಹಾಗೂ ಸ್ನೇಹಿತರನ್ನು ಆತಂಕದ ಸ್ಥಿತಿಗೆ ಕೊಂಡೊಯ್ಯುತ್ತಿದೆ.

ಮಂಜೇಶ್ವರ ಚರ್ಚ್ ಬೀಚ್ ರಸ್ತೆಯ ನಿವಾಸಿ ಮೀನು ಕಾರ್ಮಿಕರಾದ ರೋಷನ್ ಮೊಂತೆರೋ

ಮಂಜೇಶ್ವರ ಚರ್ಚ್ ಬೀಚ್ ರಸ್ತೆಯ ನಿವಾಸಿ ಮೀನು ಕಾರ್ಮಿಕರಾದ ರೋಷನ್ ಮೊಂತೆರೋ [42] ನ.18ರಂದು ರಾತ್ರಿ ಸುಮಾರು 11.45ರ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಬಗ್ಗೆ ಪತ್ನಿ ರೇಖ ಮೊಂತೆರೋ ಮಂಜೇಶ್ವರ ಪೋಲೀಸರಿಗೂ ದೂರು ನೀಡಿ ಕೇಸು ದಾಖಲಿಸಿದ್ದರು. ಇವರು ನಾಪತ್ತೆಯಾಗುವ ಸಂದರ್ಭದಲ್ಲಿ ವಾಚ್, ಪರ್ಸ್, ಮೊಬೈಲ್, ಉಂಗುರು ಮನೆಯಲ್ಲಿಟ್ಟಿದ್ದರು.

ಮಂಜೇಶ್ವರ ಚರ್ಚ್ ಬೀಚ್ ರಸ್ತೆಯ ನಿವಾಸಿ ಮೀನು ಕಾರ್ಮಿಕರಾದ ರೋಷನ್ ಮೊಂತೆರೋರವರ ಕುಟುಂಬ

ಆರಂಭದಲ್ಲಿ ಸಂಬಂಧಿಕರು, ಸ್ನೇಹಿತರು, ಊರವರು, ಕೋಸ್ಟಲ್ ಪೋಲೀಸರು ತಲಪಾಡಿ ಸಹಿತ ಮಂಜೇಶ್ವರ ಪರಿಸರ ಪ್ರದೇಶದ ಸಮುದ್ರ, ಕೆರೆ, ಬಾವಿ ಮೊದಲಾದ ಕಡೆಗಳಲ್ಲಿ ಹುಡುಕಾಡಿದ್ದು, ಯಾವುದೇ ಸುಳಿವು ಲಭಿಸಲಿಲ್ಲ, ಬಳಿಕ ಮಂಜೇಶ್ವರ ಪೋಲೀಸರ ನೇತೃತ್ವದಲ್ಲಿ ಕೂಡಾ ಶ್ವಾನ ದಳ ತಲುಪಿ ಮನೆ ಸಹಿತ ಪರಿಸರದಲ್ಲಿ ಹುಡುಕಾಡಿದ್ದು, ಯಾವುದೇ ಮಾಹಿತಿ ಲಭಿಸಲಿಲ್ಲ.

ಮನೆ ಪರಿಸರದ ಕಟ್ಟಡದಲ್ಲಿರುವ ಸಿಸಿ ಕ್ಯಾಮರದಲ್ಲೂ ಇವರ ದೃಶ್ಯ ಪತ್ತೆಯಾಗಲಿಲ್ಲ. ಇವರ ನಿಗೂಡ ನಾಪತ್ತೆ ಪತ್ನಿ, ಎರಡು ಮಕ್ಕಳು, ತಾಯಿ ಹಾಗೂ ಸ್ನೇಹಿತರು, ಊರವರಲ್ಲಿ ಸಂಕಷ್ಟದ ಸ್ಥಿತಿ ಉಂಟಾಗಿದೆ. ರೋಷನ್‌ರಿಗೆ ಅಲ್ಪ ಸ್ವಲ್ಪ ಸಾಲವಿರುವುದಾಗಿ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೇರೆ ಹೋಗಿರಬಹುದೆ ಹೋಗಿದ್ದರೆ ಪೋನ್ ಕರೆಯಾದರೂ ಯಾಕೆ ಮಾಡಲಿಲ್ಲವೆಂದು ಎಂದು ಸಂಬಂಧಿಕರಲ್ಲಿ ಹಾಗೂ ಸ್ನೇಹಿತರಲ್ಲಿ ಪ್ರಶ್ನೆಯಾಗಿದೆ. ಪೋಲೀಸರು ತನಿಖೆಯ ಹಿನ್ನೆಲೆಯಲ್ಲಿ ಅವರ ಪೋನ್ ತಪಾಸಣೆ ನಡೆಸಿ ಸ್ನೇಹಿತರನ್ನು ಠಾಣೆಗೆ ಕರೆದು ವಿಚಾರಣೆ ಕೂಡಾ ನಡೆಸಲಾಗಿದೆ ಆದರೆ ಸಂಶಯಾಸ್ಪದವಾಗಿ ಯಾವುದೇ ಸುಳಿವು ಲಭಿಸಿಲ್ಲವೆನ್ನಲಾಗಿದೆ.

ಪೋಲೀಸರು ಕರ್ನಾಟಕ ಸಹಿತ ವಿವಿಧ ಪೋಲೀಸ್ ಠಾಣೆಗಳಿಗೂ ಮಾಹಿತಿಯನ್ನು ನೀಡಲಾಗಿದೆ. ಅವರು ಬೇರೆ ಊರಿಗೆ ಹೋಗುವ ಸಾಧ್ಯತೆ ಇರಹಬುದಾದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ರೋಷನ್ ರವರ ನಾಪತ್ತೆ ನಿಗೂಡತೆಯಲ್ಲೇ ಉಳಿದುಕೊಂಡಿದೆ. ಪೋಲೀಸರು ಹಾಗೂ ಸ್ನೇಹಿತರು ರೋಷನ್ ರವರ ಪತ್ತೆಯಾಗಿ ಶ್ರಮಿಸುತ್ತಲೇ ಇದ್ದಾರೆ. ಸಂಬಂಧಪಟ್ಟ ಪೋಲೀಸ್ ಅಧಿಕಾರಿಗಳು ಇವರನ್ನು ಪತ್ತೆಹಚ್ಚಿ ಕೊಡಬೇಕೆಂದು ಸಂಬಂಧಿಕರು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *