ಬಂಟ್ವಾಳ: ಪೆರ್ನೆಯ ಬೀಡಿ ಉದ್ಯಮಿಯೊಬ್ಬರ ಮನೆಯಲ್ಲಿ ಮಂಗಳವಾರ ಹತ್ತಾರು ಸರಕಾರಿ ವಾಹನಗಳು ಕಂಡುಬಂದಿದ್ದು, ಐಟಿ ದಾಳಿಯಾಗಿದೆ ಎನ್ನಲಾಗಿದ್ದರೂ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ ಎಂದು ವರದಿಯಾಗಿದೆ.
ಪೆರ್ನೆಯ ಕಡಂಬು ಬಳಿ ಹೆದ್ದಾರಿ ಬಳಿಯಲ್ಲಿರುವ ಅನಿತಾ ಬೀಡಿ ಮಾಲಕ ಮಹಮ್ಮದ್ ಆಲಿಯವರ ಮನೆಗೆ ಅಧಿಕಾರಿಗಳು ತೆರಳಿ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ. ಆದರೆ ಯಾವ ಕಾರಣಕ್ಕಾಗಿ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿದ್ದಾರೆ ಎಂಬುದರ ಬಗ್ಗೆ ತಿಳಿದು ಬಂದಿರುವುದಿಲ್ಲ.
ಅಧಿಕಾರಿಗಳ ಹೇಳಿಕೆಯ ಬಳಿಕವೇ ಯಾವ ಕಾರಣಕ್ಕಾಗಿ ಅಧಿಕಾರಿಗಳು ಉದ್ಯಮಿ ಮನೆಗೆ ಭೇಟಿ ನೀಡಿದ್ದಾರೆ ಎಂದು ತಿಳಿಯಬೇಕಿದೆ.