ಜಪಾನ್ ಚಂದ್ರಯಾನ ರಾಕೆಟ್ ಉಡಾವಣೆ ರದ್ದು

Share with

ಜಪಾನ್: ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ, ಜಪಾನ್ ಕೈಗೊಂಡಿದ್ದ ಚಂದ್ರಯಾನ ರಾಕೆಟ್ ಉಡಾವಣೆಯು ರದ್ದಾಗಿದೆ.

ಜಪಾನಿನ ಬಾಹ್ಯಾಕಾಶ ಸಂಸ್ಥೆ ಇಂದು ಬೆಳಗ್ಗೆ ಚಂದ್ರನ ಮೇಲ್ಮೈಗೆ ಲ್ಯಾಂಡರ್ ಮತ್ತು ಎಕ್ಸ್-ರೇ ಮಿಷನ್ ನೌಕೆಯನ್ನು ಉಡಾವಣೆ ಮಾಡಲು ನಿರ್ಧರಿಸಿತ್ತು. ದೇಶದ ಮೊದಲ ಚಂದ್ರಯಾನ ಲ್ಯಾಂಡರ್ ಹೊತ್ತ H2A ರಾಕೆಟ್ ಉಡಾವಣೆ ಕಾರ್ಯಾಚರಣೆಯನ್ನು ಪ್ರತಿಕೂಲ ಹವಾಮಾನದಿಂದಾಗಿ ರದ್ದುಗೊಳಿಸಲಾಗಿದೆ ಎಂದು ಜಪಾನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ವರದಿ ಮಾಡಿದೆ.ಎಕ್ಸ್-ರೇ ಸ್ಪೆಕ್ಟ್ರೋಸ್ಕೋಪಿ ಮತ್ತು ಇಮೇಜಿಂಗ್ ಸ್ಯಾಟಲೈಟ್ (XRISM) ಮತ್ತು ಸ್ಮಾಲ್ ಲೂನಾರ್ ಲ್ಯಾಂಡರ್ ಡೆಮಾನ್ಸ್ಟ್ರೇಷನ್ ವೆಹಿಕಲ್ (ಎಸ್ಎಲ್ಐಎಂ) ಹೊತ್ತ ಹೆಚ್-2ಎ ರಾಕೆಟ ನ್ನು ಜಪಾನ್‌ನ ನೈಋತ್ಯದಲ್ಲಿರುವ ಕಾಗೋಶಿಮಾ ಪ್ರಾಂತ್ಯದ ತನೆಗಾಶಿಮಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲು ನಿರ್ಧರಿಸಲಾಗಿತ್ತು


Share with

Leave a Reply

Your email address will not be published. Required fields are marked *