ಮಂಜೇಶ್ವರ: ಬಂಗ್ರಮಂಜೇಶ್ವರ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ಶ್ರೀ ವೀರಭದ್ರ ದೇವರ ಬಲಿ ಉತ್ಸವ ಫೆ.11ರಿಂದ 14ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
11ರಂದು ಸಂಜೆ 3.45ಕ್ಕೆ ಸಾಮೂಹಿಕ ಪ್ರಾರ್ಥನೆ, ರಾತ್ರಿ 7ಕ್ಕೆ ಶ್ರೀ ವೀರ ಮಹಾಗಣಪತಿ ದೇವರಿಗೆ ರಂಗಪೂಜೆ, 7.30ಕ್ಕೆ ಶ್ರೀ ವೀರಭದ್ರ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
12ರಂದು ಬೆಳಿಗ್ಗೆ 7ಕ್ಕೆ ಶ್ರೀ ದೇವರಿಗೆ ಬೆಳಿಗ್ಗಿನ ಪೂಜೆ, 7.30ಕ್ಕೆ ಶ್ರೀ ದೈವಗಳ ಭಂಡಾರ ಆರೋಹಣ, 8ಕ್ಕೆ ಶ್ರೀ ವೀರಭದ್ರ ಸ್ವಾಮಿ, ಶ್ರೀ ವೀರ ಮಹಾಗಣಪತಿ, ಶ್ರೀ ದುರ್ಗಾಪರಮೇಶ್ವರಿ, ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರಿಗೆ ಕಲಶಾಭಿಷೇಕ, ಗಣಹೋಮ, 8.30ಕ್ಕೆ ಶ್ರೀ ಮಹಾಮ್ಮಾಯೀ ಅಮ್ಮನವರಿಗೆ ಮತ್ತು ಶ್ರೀ ದೈವಗಳಿಗೆ ಕಲಶಾಭಿಷೇಕ ಹಾಗೂ ದೂಪ ಸೇವೆ, 8.45ಕ್ಕೆ ಶ್ರೀ ನಾಗದೇವರಿಗೆ ಕಲಶಾಭಿಷೇಕ ಮತ್ತು ತಂಬಿಲ ಸೇವೆ, 9ಕ್ಕೆ ಚಂಡಿಕಾ ಹೋಮ ಪ್ರಾರಂಭ, 11.30ಕ್ಕೆ ಪೂರ್ಣಾಹುತಿ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 12.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬಿ.ಸಿ ರೋಡ್ ಬೋಳ್ನ ಬಿ.ಹರಿಶ್ಚಂದ್ರ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸುವರು.
ರಾಮ ಗುರಿಕಾರ ಯಾನೆ ಮೋಹನ್ ಶೆಟ್ಟಿಗಾರ್ ಪೆರಿಯಪ್ಪಾಡಿ ಗೌರವ ಉಪಸ್ಥಿತರಿರುವರು. ಕೊಡ್ಲಮೊಗರು ಶ್ರೀ ವಾಣೀವಿಜಯ ಹೈಯರ್ ಸೆಕಂಡರಿ ಶಾಲಾ ಅಧ್ಯಾಪಕಿ ಆಶಾ ದಿಲೀಪ್ ಸುಳ್ಯಮೆ ಧಾರ್ಮಿಕ ಪ್ರವಚನ ನೀಡುವರು. ವಿವಿಧ ವಲಯಗಳ ಗಣ್ಯರು ಭಾಗವಹಿಸುವರು. ಈ ಸಂದರ್ಭದಲ್ಲಿ ಸಾಧಕರಿಗೆ ಗೌರವಾರ್ಪಣೆ, ಸನ್ಮಾನ, ವಿಶೇಷ ಪುರಸ್ಕಾರ, ಪ್ರತಿಭಾ ಪುರಸ್ಕಾರ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ಸಂಜೆ 4ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 6ಕ್ಕೆ ಭಜನೆ, ರಾತ್ರಿ 7ಕ್ಕೆ ಶ್ರೀ ವೀರಭದ್ರ ದೇವರಿಗೆ ರಂಗಪೂಜೆ, 7.30ಕ್ಕೆ ಶ್ರೀ ದೈವಗಳಿಗೆ ದೂಪಸೇವೆ, 8ರಿಂದ ಶ್ರೀ ವೀರಭದ್ರ ದೇವರ ಬಲಿ ಉತ್ಸವ, ದೈವಗಳ ಭೇಟಿ, ಕಟ್ಟೆಪೂಜೆ, ಬಟ್ಟಲು ಕಾಣಿಕೆ ಹಾಗೂ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 11ಕ್ಕೆ ಶ್ರೀ ಮಹಾಮ್ಮಾಯಿ ಸನ್ನಿಧಿಯಲ್ಲಿ ಮಹಪೂಜೆ ಮತ್ತು ಮಾರಿಪೂಜೆ, ಪ್ರಸಾದ ವಿತರಣೆ, ಪ್ರಾತಕಾಲ 2ಕ್ಕೆ ಶ್ರೀ ದೈವಗಳ ಸನ್ನಿಧಿಯಲ್ಲಿ ದೈವಗಳ ನರ್ತನ ಸೇವೆ, ಬಲಿ ಉತ್ಸವ, ಪ್ರಸಾದ ವಿತರಣೆ ನಡೆಯಲಿದೆ.
13ರಂದು ಬೆಳೀಗ್ಗೆ 6.30ಕ್ಕೆ ಶ್ರೀ ವೀರಭದ್ರ ದೇವರಿಗೆ ಕಲಶಾಭಿಷೇಕ, 7ಕ್ಕೆ ಬೆಳಿಗ್ಗಿನ ಪೂಜೆ, 7.30ಕ್ಕೆ ಶ್ರೀ ಮಹಮ್ಮಾಯಿ ಅಮ್ಮನವರಿಗೆ ಮತ್ತು ದೈವಗಳ ಸಂಕ್ರಮಣ ಪೂಜೆ, 9ಕ್ಕೆ ಶ್ರೀ ಮಲರಾಯ ದೈವದ ನೇಮೋತ್ಸವ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 12.30ಕ್ಕೆ ಹರಕೆ ರೂಪದಲ್ಲಿ ಬಂದ ಸೀರೆ ಏಲಂ, ಸಂಜೆ 4ರಿಂದ ಶ್ರೀ ಚಾಮುಂಡೇಶ್ವರಿ ದೈವದ ನೇಮೋತ್ಸವ ಮತ್ತು ಪ್ರಸಾದ ವಿತರಣೆ, 6ಕ್ಕೆ ಭಜನೆ, ರಾತ್ರಿ 7ಕ್ಕೆ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, 7.15ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ಅನಸಂತರ್ಪಣೆ, 9ಕ್ಕೆ ಶ್ರೀ ಧೂಮಾವತಿ ಬಂಟ ದೈವಗಳ ನೇಮೋತ್ಸವ ಮತ್ತು ಪ್ರಸಾದ ವಿತರಣೆ, ಪ್ರಾತಕಾಲ 3ಕ್ಕೆ ಶ್ರೀ ಬಬ್ಬರ್ಯ ದೈವದ ಕೋಲ, ಪ್ರಸಾದ ವಿತರಣೆ, 4.30ಕ್ಕೆ ಶ್ರೀ ಕೊರತಿ, ಗುಳಿಗ ದಿವಗಳ ಕೋಲ, ಪ್ರಸದ ವಿತರಣೆ, 14ರಂದು ಬೆಳಿಗ್ಗೆ 6.30ಕ್ಕೆ ಶ್ರೀ ವೀರಭದ್ರ ದೇವರಿಗೆ ಕಲಶಾಭಿಷೇಕ, 7ಕ್ಕೆ ಬೆಳಿಗ್ಗಿನ ಪೂಜೆ, 7.30ಕ್ಕೆ ಶ್ರೀ ದೈವಗಳ ಭಂಡಾರ ಅವರೋಹಣ, ಮಧ್ಯಾಹ್ನ 12ಕ್ಕೆ ಮಹಪೂಜೆ, ಅನ್ನಸಂತರ್ಪಣೆ, 15ರಂದು ಬೆಳಿಗ್ಗೆ 7ಕ್ಕೆ ಪೂಜೆ, 8ಕ್ಕೆ ಶುದ್ದ ಕಲಶಾಭಿಷೇಕ, 12ಕ್ಕೆ ಮಹಾಪೂಜೆ ನಡೆಯಲಿದೆ.