ಬಂಟ್ವಾಳ: ವೀರಕಂಬ ಗ್ರಾಮದ ಗ್ರಾಮದೈವ ಶ್ರೀ ಗಿಳಿಕಿಂಜತಾಯಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

Share with

ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಗ್ರಾಮದೈವ ಶ್ರೀ ಗಿಳಿಕಿಂಜತಾಯಿ ದೇವಸ್ಥಾನದ ವರ್ಷಾವಧಿ ಜಾತ್ರೆಯು ಊರ ಪರವೂರ ಭಕ್ತದಿಗಳ ಸೇರಿಗೆಯಲ್ಲಿ ವಿಜೃಂಭಣೆಯಿಂದ ಜರಗಿತು.

ಗ್ರಾಮದೈವ ಶ್ರೀ ಗಿಳಿಕಿಂಜತಾಯಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

ದಿನಾಂಕ 7-4-2024ರ ರಾತ್ರಿ ಗಿಳಿಕಿಂಜ ಬಂಡಾರ ಮನೆಯಿಂದ ದೈವದ ಬಂಡಾರ ಬಂದು ಹೂವಿನ ಪೂಜಾ ಕಾರ್ಯಕ್ರಮ ಜರಗಿತು, ಬಳಿಕ ಉತ್ಸವ ಸಮಿತಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತುಳು ಹಾಸ್ಯಮಯ ಸಂಸಾರಿಕ ನಾಟಕ “ಇನಿ ಆತುಂಡ ಎಲ್ಲೆ” ಜರಗಿತು.

ನಂತರ ಕಂಬಳ ಗದ್ದೆ ವಲಸರಿ ಜರಗಿತು, ದಿನಾಂಕ 8-4-2024 ನೇ ಸೋಮವಾರ ಬೆಳಿಗ್ಗೆ ಗಿಳಿಕಿಂಜತಾಯಿ ದೈವದ ನೇಮೋತ್ಸವ ಶ್ರೀ ಶಾರದಾ ಭಜನಾ ಮಂಡಳಿ ವೀರಕಂಬ ದವರ ಭಜನಾ ಸೇವಾ ಬಲಿಯೊಂದಿಗೆ ಜರಗಿ ಭಕ್ತಾದಿಗಳಿಗೆ ಗಂಧ ಬೂಲ್ಯ ಪ್ರಸಾದ ನೀಡಲಾಯಿತು.

ಈ ಸಂದರ್ಭದಲ್ಲಿ ಯುವಶಕ್ತಿ ಪ್ರೆಂಡ್ಸ್ ನೇತೃತ್ವದಲ್ಲಿ ಸಾರ್ವಜನಿಕ ಅನ್ನದಾನದ ವ್ಯವಸ್ಥೆ ಮಾಡಲಾಗಿತು. ಸಾಯಂಕಾಲ ಕಲ್ಲುರ್ಟಿ ಕಲ್ಕುಡ, ಕೊರತಿ, ಕೊರಗಜ್ಜ ದೈವದ ನೇಮ ಜರಗಿತು, ಬಳಿಕ ಕುಕ್ಕಿಕಟ್ಟೆ ವಲಸರಿ ಜರಗಿ ಕೆರೆ ನೇಮೋತ್ಸವ ಜರಗಿತು.


Share with

Leave a Reply

Your email address will not be published. Required fields are marked *