ಜು.16: ಜವನೆರೆ ತುಡರ್‌ ಟ್ರಸ್ಟ್‌ನಿಂದ ʼಮಂಥನ-2023ʼ ರಾಷ್ಟ್ರೀಯ ಶೈಕ್ಷಣಿಕ ಕಾರ್ಯಾಗಾರ

Share with

ಬಂಟ್ವಾಳ: ಜವನೆರೆ ತುಡರ್ ಟ್ರಸ್ಟ್ ( ರಿ.) ಸಿದ್ಧಕಟ್ಟೆ, ಬಂಟ್ವಾಳ ತಾಲೂಕು, ದ. ಕ. ಎಸ್.ಎಸ್.ಎಲ್.ಸಿ. ಹಾಗೂ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ, ವೃತ್ತಿ ಮಾರ್ಗದರ್ಶನ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿ “ಮಂಥನ-2023” ರಾಷ್ಟ್ರೀಯ ಶೈಕ್ಷಣಿಕ ಕಾರ್ಯಾಗಾರ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ ಜು.16ರಂದು ಬೆಳಗ್ಗೆ 8.30ರಿಂದ ಸಿದ್ಧಕಟ್ಟೆ ಬ್ರಹ್ಮ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಜರಗಲಿದೆ.

ಬೆಳಿಗ್ಗೆ 8.30ರಿಂದ ವಿದ್ಯಾರ್ಥಿಗಳಿಗೆ ನೋಂದಾವಣೆ, ಲಘು ಉಪಹಾರ, 9 ಗಂಟೆಗೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜರಗಲಿದೆ. ಗಂಟೆ 9 ರಿಂದ 12.13 ರವರೆಗೆ ರಕ್ತದಾನ ಶಿಬಿರ, 10 ಗಂಟೆಯಿಂದ 3.30ರವರೆಗೆ ರಾಷ್ಟ್ರೀಯ ಶೈಕ್ಷಣಿಕ ಕಾರ್ಯಾಗಾರ, ಮಧ್ಯಾಹ್ನ 1.00-1.30ಕ್ಕೆ ಭೋಜನ ವಿರಾಮ, ಮಧ್ಯಾಹ್ನ ಗಂಟೆ3.30 ಕ್ಕೆ ಸಮಾರೋಪ ಸಮಾರಂಭ ಜರಗಲಿದೆ.

ಕಾಸರಗೋಡು ಪೆರಿಯ ಕೇರಳ ಕೇಂದ್ರಿಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಚೇತನ್‌ ಮುಂಡಾಜೆ ಇವರ ಸಂಯೋಜಕತ್ವದಲ್ಲಿ, ಬೆಳಿಗ್ಗೆ 10 ರಿಂದ 12.30ರ ವರೆಗೆ ರಾಷ್ಟೀಯ ಶೈಕ್ಷಣಿಕ ಕಾರ್ಯಾಗಾರದಲ್ಲಿ ರಾಷ್ಟ್ರೀಯ ತರಬೇತುದಾರ ಅಭಿಜಿತ್‌ ಕರ್ಕೇರರವರು ಸಂಪೂನ್ಮಲ ವ್ಯಕ್ತಿಯಾಗಿ ಭಾಗವಹಿಸಿ ಬಲಿಷ್ಠ ಭಾರತ-ಸದೃಢ ವ್ಯಕ್ತಿತ್ವ ವಿಷಯದ ಕುರಿತು ಮಾತನಾಡಲಿದ್ದಾರೆ. 12.30ರಿಂದ 1 ರವರೆಗೆ ನಿವೃತ ಶಿಕ್ಷಕ ನಾರಾಯಣ ನಾಯಕ್‌ ಕರ್ಪೆಯವರು ವಿದ್ಯಾರ್ಥಿ ವೇತನದ ಮಾಹಿತಿ ನೀಡಲಿದ್ದಾರೆ. 1.30ರಿಂದ 2.30 ರವರೆಗೆ ಉಡುಪಿ ನಿಧಿ ಬಿ. ಎನ್‌. ಪೊಲೀಸ್ ಉಪನಿರೀಕ್ಷಕರು, ಉದ್ಯೋಗಿ ಭಾರತ–ವಿದ್ಯಾರ್ಥಿ ಪಥ ಕುರಿತು ಉಪನ್ಯಾಸ ನೀಡಲಿದ್ದಾರೆ. 2.30ರಿಂದ 3ರವರೆಗೆ ಮೂಡಬಿದಿರೆ, ಮಿಜಾರ್‌, ಆಳ್ವಾಸ್ ಪುನರ್ಜನ ಸಮಗ್ರ ವೈದ್ಯಕೀಯ ದುಶ್ಚಟ ನಿವಾರಣಾ ಕೇಂದ್ರ, ಮನೋರೋಗ ವಿಭಾಗದ ಆಪ್ತ ಸಮಾಲೋಚಕರು ಲೋಹಿತ್.ಕೆ ರವರು ಯುವಜನತೆ-ಮಾನಸಿಕ ಆರೋಗ್ಯದ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌ರವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಮು‍ಖ್ಯ ಅತಿಥಿಗಳಾಗಿ ನಿವೃತ್ತ ಸೇನಾಧಿಕಾರಿ ಹಾಗೂ ಸಾಮಾಜಿಕ ಕಾರ್ಯಕರ್ತ ಬ್ರಿಜೇಶ್‌ ಚೌಟ,ಬಂಟ್ವಾಳ ವಾಲಿಬಾಲ್‌ ಅಸೋಸೊಯೇಷನ್‌ನ ಅಧ್ಯಕ್ಷ ಸುಪ್ರೀತ್‌ ಆಳ್ವ, ರೋಟರಿ ಫಲ್ಗುಣಿ ಸಿದ್ಧಕಟ್ಟೆ ಅಧ್ಯಕ್ಷ ಮೋಹನ್‌ ಜಿ. ಮೂಲ್ಯ, ಸಿದ್ಧಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ದಿನೇಶ್‌ ಸುಂದರ ಶಾಂತಿ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ರಕ್ತನಿಧಿ ಲೇಡಿಗೋಷನ್‌ ಆಸ್ಪತ್ರ ಮಂಗಳೂರು ಇದಲ ಜಿಲ್ಲಾ ಸಂಯೋಜಕ ಪ್ರವೀಣ್‌ ಕುಮಾರ್‌, ರಾಯಿ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ರಶ್ಮಿತ್‌ ಶೆಟ್ಟಿ ಕೈತ್ರೋಡಿ, ಸಿದ್ಧಕಟ್ಟೆ ಸರಕಾರಿ ಪ.ಪೂ ಕಾಲೇಜಿನ ಉಪನ್ಯಾಸಕ ಶೀನಪ್ಪ ಭಾಗಿಯಾಗಲಿದ್ದಾರೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜರಗಲಿದೆ.

ಅಪರಾಹ್ನ 3 ಗಂಟೆ ಬಳಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಜರಗಲಿದ್ದು ಮುಖ್ಯ ಅತಿಥಿಗಳಾಗಿ ಮಂಗಳೂರು ಬಿರುವೆರ್ ಕುಡ್ಲ (ರಿ.) ಸ್ಥಾಪಕಾಧ್ಯಕ್ಷ ಉದಯ್‌ ಪೂಜಾರಿ ಬಲ್ಲಾಳ್‌ ಭಾಗ್, ರೋಟರಿ ಜಿಲ್ಲೆ 3181 ಅಸಿಸ್ಟೆಂಟ್ ಗವರ್ನರ್ ರೊ| ರಾಘವೇಂದ್ರ ಭಟ್, ಶ್ರೀ ಮಂತ್ರದೇವತಾ ಸಾನ್ನಿಧ್ಯ ಕಟ್ಟೆಮಾರ್ ಧರ್ಮದರ್ಶಿ ಮನೋಜ್ ಕುಮಾರ್ ಕಟ್ಟೆಮಾರ್, ರೋಟರಿ ಫಲ್ಗುಣಿ ಸಿದ್ಧಕಟ್ಟೆ ನಿಕಟಪೂರ್ವ ಅಧ್ಯಕ್ಷ ರೊ| ಗಣೇಶ್ ಶೆಟ್ಟಿ, ಬಂಟ್ವಾಳ ಘಟಕ ಯುವವಾಹಿನಿ ಅಧ್ಯಕ್ಷ ಗಣೇಶ್‌ ಪೂಂಜರಕೋಡಿ, ಅರಳ ಓಂ ಜನಹಿತಯಾ ಆಂಗ್ಲ ಮಾಧ್ಯಮ ಶಾಲಾ ಆಡಳಿತಾಧಿಕಾರಿ ರಕ್ಷಾಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಜವನೆರೆ ತುಡರ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ದಿನೇಶ್‌ ಸುವರ್ಣ ರಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಡರ್‌ ಪುರಸ್ಕಾರ-2023:- ಸಮಾಜ ಸೇವಕರು, ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಶನ್‌ ಇದರ ಚಂದ್ರಶೇಖರ ಬಿ.ಸಿ ರೋಡ್‌ ಅವರಿಗೆ ʼತುಡರ್‌ ಪುರಸ್ಕಾರ – 2023ʼ ನೀಡಿ ಗೌರವಿಸಲಿದೆ.


Share with

Leave a Reply

Your email address will not be published. Required fields are marked *