
ಕಾಸರಗೋಡು: ಕಣ್ಣೂರು ದೇವಸ್ಯ ಶ್ರೀ ವಿಷ್ಣುಮೂರ್ತಿ ಯುವಜನ ಸಂಘ ಇದರ ಆಶ್ರಯದಲ್ಲಿ ʼಕೆಸರುಗದ್ದೆ 2023ʼ ಕಾರ್ಯಕ್ರಮ ಜು.23 ರಂದು ವಿಜೃಂಭಣೆಯಿಂದ ಜರಗಿತು. ಕೆಸರುಗದ್ದೆ ಕ್ರೀಡಾಕೂಟವನ್ನು ಪುತ್ತಿಗೆ ಪಂಚಾಯತ್‌ನ ಅಧ್ಯಕ್ಷ ಸುಬ್ಬಣ್ಣ ಆಳ್ವ ಉದ್ಘಾಟಿಸಿದರು. ʼಕೆಸರು ಗದ್ದೆ-2023ʼ ಇದರಲ್ಲಿ ಗ್ರಾಮೀಣ ಸೊಗಡಿನ ಆಟಗಳನ್ನು ಆಯೋಜನೆ ಮಾಡಿದ್ದು, ಮಕ್ಕಳು ಸೇರಿದಂತೆ ಮಹಿಳೆಯರು, ಪುರುಷರು ಸೇರಿ ಸಂಭ್ರಮಪಟ್ಟರು.

ಕಾರ್ಯಕ್ರಮದಲ್ಲಿ ಪುತ್ತಿಗೆ ಪಂಚಾಯತ್ ಸದಸ್ಯ ಜನಾರ್ದ ಪೂಜಾರಿ ಕೆ, ಶ್ರೀ ವಿಷ್ಣುಮೂರ್ತಿ ಯುವಜನ ಸಂಘದ ಗೌರವಾಧ್ಯಕ್ಷ ರಮೇಶ್ ದೇವಸ್ಯ, ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಗೌರವಧ್ಯಕ್ಷ ರಾಮಕೃಷ್ಣ ಆಳ್ವ ಬಾಲಕಿಲ, ರಕ್ತೇಶ್ವರಿ ನಾಗಪರಿವಾರ ಸೇವಾ ಸಮಿತಿಯ ರಘುನಾಥ ರೈ, ಮೋರ ಶ್ರೀ ಐವೆರ್ ಭಗವತಿ ಕಮಿಟಿಯ ಅಧ್ಯಕ್ಷ ನಾರಾಯಣ ಎನ್.ಕೆ, ಶ್ರೀ ವಿಷ್ಣುಮೂರ್ತಿ ಯುವಜನ ಸಂಘದ ಅಧ್ಯಕ್ಷ ಮಧುಸುದನ, ವಿಷ್ಣುಮೂರ್ತಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಮನೋಹರ, ಕೇರಳ ಕರ್ಷಕೋತ್ತಮ ಪ್ರಶಸ್ತಿ ವಿಜೇತ ಶಿವಾನಂದ ಬಲಕ್ಕಿಲ, ಶರೀಫ್ ಕಣ್ಣೂರು ಅತಿಥಿಗಳಾಗಿ ಭಾಗವಹಿಸಿದರು.
ಸನ್ಮಾನ: ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡಿದ ಅವಿನಾಶ್ ಬಲಕಿಲ ಹಾಗೂ ʼಕೆಸರು ಗದ್ದೆʼ ತನ್ನ ಛಾಯಾಗ್ರಾಹಣದ ಮೂಲಕ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ ಸುನಿಲ್ ಕುಮಾರ್ ಇವರನ್ನು ಸನ್ಮಾನಿಸಲಾಯಿತು.