ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಸಂಜೆ 6 ಗಂಟೆ ತನಕ 73.28ಶೇಕಡಾ ಮತದಾನವಾಗಿದೆ.

ಆರು ಗಂಟೆಗೆ ಮತದಾನ ಪ್ರಕ್ರಿಯೆ ಮುಗಿಯಬೇಕಿದ್ದರೂ ಮತದಾನ ವಿಳಂಬವಾಗಿ ಸಾಗುತ್ತಿದೆ .ಕೆಲ ಮತಗಟ್ಟೆಗಳಲ್ಲಿ 6 ಗಂಟೆ ನಂತರವೂ ಸರದಿ ಸಾಲು ಕಂಡುಬಂದಿದೆ.
11,12,190 ಮಂದಿಯಲ್ಲಿ 8,14,997 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ದೇಲಂಪಾಡಿ ಹಾಗೂ ಕಾಞಂಗಾಡ್ ನಲ್ಲಿ ಕೆಲ ಘಟನೆ ಬಿಟ್ಟರೆ ಮತದಾನ ಶಾಂತಿಯುತವಾಗಿತ್ತು. ನಕಲಿ ಮತದಾನದ ಬಗ್ಗೆ ಅಲ್ಲಲ್ಲಿ ವರದಿಗಳು ಬಂದಿವೆ. ಜಿಲ್ಲಾ ಬ್ಲಾಕ್, ಗ್ರಾಮ ಪಂಚಾಯತ್ ಹಾಗೂ ಮೂರು ನಗರಸಭೆ ಸೇರಿದಂತೆ 48 ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮತದಾನ ನಡೆದಿದೆ.
ಡಿ.13 ರಂದು ಫಲಿತಾಂಶ ಹೊರಬೀಳಲಿದೆ.




