ಕುಂಬಳೆ : ಇಲ್ಲಿನ ಸಮೀಪದ ಪೆರುವಾಡ್ ಕಡಲತೀರದಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು ದಡದಲ್ಲಿ ನಿಲ್ಲಿಸಿದ್ದ ಫೈಬರ್ ದೋಣಿ ಮತ್ತು ಬಲೆಗಳು ಬೆಂಕಿಗಾಹುತಿಯಾಗಿವೆ. ಇಲ್ಲಿನ ಹಸೈನಾರ್, ಬಡುವ ಕುಂಞ, ಕಾಸಿಂ ಮತ್ತು ಹಸೈನಾರ್ ಎಂಬವವರಿಗೆ ಸೇರಿದೆ ದೋಣಿಗಳು ಇದಾಗಿವೆ.

ಗುರುವಾರ(ಡಿ.11)ಮಧ್ಯಾಹ್ನ 12.30 ರ ಸುಮಾರಿಗೆ ಈ ಘಟನೆ ನಡೆದಿದೆ. ಚುನಾವಣೆಯಾಗಿದ್ದರಿಂದ ದೋಣಿ ಸಮುದ್ರಕ್ಕೆ ಹೋಗಿರಲಿಲ್ಲ. ಬೆಂಕಿ ಹತ್ತಿರದ ಪ್ರದೇಶಗಳಿಗೆ ಹರಡುತ್ತಿದ್ದಂತೆ ಉಪ್ಪಳದ ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸಿತು. ಸ್ಥಳೀಯರು ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಬೆಂಕಿ ಅವಘಡಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಮಾಹಿತಿ ಪಡೆದ ಪೊಲೀಸರು ತನಿಖೆ ಆರಂಭಿಸಿದ್ದಾರೆ.




