ಕಾಸರಗೋಡು: ಎರಡು ಪ್ಲಾಟ್ ಫಾರ್ಮ್ಗಳಿಗೆ ಹಾದುಹೋಗಲು ಸೇತುವೆ, ನಡೆದುಕೊಂಡು ಹತ್ತಲು ಕಷ್ಟಪಡುವವರಿಗೆ ಎಸ್ಕಲೇಟರ್, ಟಿಕೆಟ್ ಕೌಂಟರ್ನ ಹಿಂಭಾಗದಲ್ಲಿ ಹಾಗೂ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ವಿಫುಲವಾದ ಪಾರ್ಕಿಂಗ್, ಅದರ ಮೇಲೆ ರಸ್ತೆಗೆ ಸಮಾನಂತರವಾಗಿ ವ್ಯಾಪಾರ ಸಮುಚ್ಛಯ ನಿರ್ಮಾಣಗೊಳ್ಳಲಿದೆ. ಅಮೃತ್ ಭಾರತ್ ಯೋಜನೆಯಡಿ ಕಾಸರಗೋಡು ರೈಲು ನಿಲ್ದಾಣದ ಮುಖನೋಟ ಬದಲಾಗಲಿದೆ.
ಅಮೃತ್ ಭಾರತ್ ಯೋಜನೆಯ ಅಂಗವಾಗಿ ನವೀಕರಣ ಕಾರ್ಯಾಚರಣೆಗಳ ಯೋಜನಾ ರೂಪುರೇಶೆಯೊಂದಿಗೆ ಪಾಲಕ್ಕಾಡು ಡಿವಿಶನ್ ಎಡಿಆರ್ಎಂ ಎಸ್. ಜಯಕೃಷ್ಣನ್ ಹಾಗೂ ಉನ್ನತ ಅಧಿಕಾರಿಗಳು ತಲುಪಿದಾಗ ಅಭಿವೃದ್ಧಿ ಯೋಜನೆಗಳ ಕುರಿತು ವಿವರಿಸಲಾಯಿತು.
ಗುರುವಾರ ಮಧ್ಯಾಹ್ನ ರೈಲ್ವೇ ಅಧಿಕಾರಿಗಳು ಕಾಸರಗೋಡು ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದು, ನಿರ್ಮಾಣ ಗುತ್ತಿಗೆ ಸ್ವೀಕರಿಸಿದ ಗುತ್ತಿಗೆದಾರರು ಕೂಡಾ ಜತೆಗಿದ್ದರು. ಪಾರ್ಕಿಂಗ್ ವ್ಯವಸ್ಥೆಯನ್ನು ಶೀಘ್ರ ನಡೆಸಲು ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ರೈಲು ನಿಲ್ದಾಣ ಪ್ಲಾಟ್ಫಾಮ್ರ್ನಲ್ಲಿ ಉತ್ತರ ಭಾಗದಲ್ಲಿ ಅಸ್ತಿತ್ವದಲ್ಲಿರುವ ಸಂಕವನ್ನು ಮುರಿದು ನೂತನ ಸೇತುವೆ ನಿರ್ಮಿಸಲಾಗುವುದು. ಅದಕ್ಕೆ ಹೊಂದಿಕೊಂಡು ಎಸ್ಕಲೇಟರ್ ಬರಲಿದೆ. ಟಿಕೆಟ್ ಕೌಂಟರ್ನ ಹಿಂಭಾಗದ ಪಾರ್ಕಿಂಗ್ ಸ್ಥಳದಿಂದ ಇನ್ನೊಂದು ಎಸ್ಕಲೇಟರ್ ಸ್ಥಾಪಿಸಲಾಗುವುದು. ಅಸ್ತಿತ್ವದಲ್ಲಿರುವ ಲಿಫ್ಟ್ನೊಂದಿಗೆ ಎಸ್ಕಲೇಟರ್ ಬಂದರೆ ಪ್ರಯಾಣಿಕರಿಗೆ ಪ್ಲಾಟ್ಫಾಮ್ರ್ಗಳಿಗಿರುವ ಕಾಲ್ನಡೆ ಪ್ರಯಾಣ ಸುಗಮಗೊಳ್ಳಲಿದೆ. ಟಿಕೆಟ್ ಕೌಂಟರ್ನಿಂದ ನೇರವಾಗಿ ಪ್ಲಾಟ್ಫಾಮ್ರ್ ಗೆ ಪ್ರವೇಶದ್ವಾರ ವ್ಯವಸ್ಥೆಗೊಳಿಸಲಾಗುವುದು. ಮೊದಲು ಜನರು ನಡೆದುಕೊಂಡು ಹೋಗುತ್ತಿದ್ದ ಸಣ್ಣ ಕಾಲುದಾರಿಯನ್ನು ಮುಚ್ಚಲಾಗಿದೆ.
ಪ್ರಸ್ತುತ ಮೇಲ್ಛಾವಣಿ ಇಲ್ಲದ ಭಾಗಗಳಲ್ಲಿ ಮೇಲ್ಛಾವಣಿಯನ್ನು ಸ್ಥಾಪಿಸಿ ಮಳೆ ಹಾಗೂ ಗಾಳಿ ತಾಗದಿರಲು ಸೌಕರ್ಯ ವ್ಯವಸ್ಥೆಗೊಳಿಸಲಾಗುವುದು. ಎಸಿ ಅಳವಡಿಸಿದ ತಂಗುದಾಣ ಕೊಠಡಿಯನ್ನು ನೂತನ ಯೋಜನೆಯಲ್ಲಿ ನಿರ್ದೇಶಿಸಲಾಗಿದೆ. ಪಾಲಕ್ಕಾಡಿನಿಂದ ಉನ್ನತ ಅಧಿಕಾರಿಗಳಾದ ಶ್ರೀಕುಮಾರ್, ಎಲ್ದೋ ಥೋಮಸ್, ಇತರ ಅಧಿಕಾರಿಗಳು ಜತೆಗಿದ್ದರು.