ಪುತ್ತೂರು: ಕೆಮ್ಮಾಯಿ ಶ್ರೀ ವಿಷ್ಣು ಯುವಕ ಮಂಡಲ, ಮೊಸರು ಕುಡಿಕೆ ಉತ್ಸವ ಸಮಿತಿ ಇವುಗಳ ಜಂಟಿ ಸಹಯೋಗದೊಂದಿಗೆ 6ನೇ ವರ್ಷದ ಮೊಸರು ಕುಡಿಕೆ ಸೆ.17ರಂದು ಕೆಮ್ಮಾಯಿ ಓಂ ಅಶ್ವತ್ಥಕಟ್ಟೆ ಬಳಿ ಜರಗಲಿದೆ.
ಉತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಸುಂದರ ಪೂಜಾರಿ ಬಡಾವು, ಅಧ್ಯಕ್ಷರಾಗಿ ಚಿದಾನಂದ ರೈ ಕೊಪ್ಪಳ,
ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ ನಾಯ್ಕ ಇವರನ್ನು ಆಯ್ಕೆ ಮಾಡಲಾಯಿತು. ಸಂಚಾಲಕರಾಗಿ
ಅಶೋಕ್ ಗೌಡ, ಕಾರ್ಯಾಧ್ಯಕ್ಷರಾಗಿ ಪ್ರಶಾಂತ್.ವಿ, ಕೋಶಾಧಿಕಾರಿಯಾಗಿ ನಾಗೇಶ್, ಕ್ರೀಡಾಕಾರ್ಯದರ್ಶಿಯಾಗಿ ಯಶವಂತ ಮತ್ತು ದಯಾನಂದ , ಉಪಾಧ್ಯಕ್ಷರಾಗಿ ಪ್ರಕಾಶ್ ಹೊಸಹೊಕ್ಲು, ಸುರೇಂದ್ರ ಬಡಾವು, ಮೆರವಣಿಗೆ ಸಮಿತಿ ಸದಸ್ಯರಾಗಿ ಸುಧಾಕರ ನಾಯ್ಕ್, ಪ್ರವೀಣ್ ನಾಯ್ಕ್, ಸುರೇಂದ್ರ ಕುಂಜಾರು , ಉಮೇಶ್ ಗೌಡ ಸಂಘಟನಾ ಕಾರ್ಯದರ್ಶಿಯಾಗಿ ಚೇತನ್ ಭರತಪುರ, ಜಯೇಶ್ ತಾರಿಗುಡ್ಡೆ ಇವರನ್ನು ಆಯ್ಕೆ ಮಾಡಲಾಯಿತು.
ಸೆ.17ರಂದು ವಿವಿಧ ಆಟೋಟ ಸ್ಪರ್ಧೆಯನ್ನು ಮಾಡಿ ಅದೇ ದಿನ ಸಂಜೆ 4.30 ಕ್ಕೆ ಶೋಭಾಯಾತ್ರೆ ಮೆರವಣಿಗೆಯಲ್ಲಿ ಸಾಹಸಮಯ ಅಟ್ಟಿ ಮಡಿಕೆ ಸ್ಪರ್ಧೆಯನ್ನು ಮಾಡುವುದಾಗಿ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.