ಹಲವು ಬೇಡಿಕೆಗಳನ್ನಿಟ್ಟು ಕೇರಳ ಸಂಸ್ಕೃತ ಅಧ್ಯಾಪಕ ಫೆಡರೇಶನ್‌ನಿಂದ ಉಪಜಿಲ್ಲಾ ವಿದ್ಯಾಭ್ಯಾಸ ಅಧಿಕಾರಿಗೆ ಮನವಿ

Share with

ಕಾಸರಗೋಡು: ಮಂಜೇಶ್ವರ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿವಿಧ ಬೇಡಿಕೆಯನ್ನು ಮುಂದಿಟ್ಟುಕೊಂಡು ಸಮರ ಹೋರಾಟದ ಅಂಗವಾಗಿ ಉಪಜಿಲ್ಲಾ ವಿದ್ಯಾಭ್ಯಾಸ ಅಧಿಕಾರಿಗೆ ನಿವೇದನೆಯನ್ನು ನೀಡಿದರು.

ಮನವಿಯಲ್ಲಿ “ಸುಮಾರು ವರ್ಷಗಳಿಂದ ನಡೆದು ಬರುತ್ತಿರುವ ಸಂಸ್ಕೃತ ವಿದ್ಯಾರ್ಥಿಗಳಿಗಾಗಿ ನಡೆಸಿಕೊಂಡು ಬರುತ್ತಿರುವ ಸಂಸ್ಕೃತೋತ್ಸವವನ್ನು ಇಲ್ಲದಂತೆ ಮಾಡಲು ಅಸೂತ್ರಿತ ಸಂಚು ನಡೆಯುತ್ತಿದೆ. ಇದಕ್ಕೆ ಎದುರಾಗಿ ಅದೇ ರೀತಿಯಲ್ಲಿ ಎಲ್ ಪಿ ವಿಭಾಗದಲ್ಲಿ ಸಂಸ್ಕೃತ ಹುದ್ದೆಯನ್ನು ಮಂಜೂರು ಗೊಳಿಸುವುದು, ಸಂಸ್ಕೃತ ಸ್ಕಾಲರ್‌ಶಿಪ್ ಮೊತ್ತವನ್ನು ಕಾಲಕ್ಕನುಗುಣವಾಗಿ ಹೆಚ್ಚಿಸಿ ವಿತರಿಸುವುದು, ಸಂಸ್ಕೃತ ಸ್ಪೆಷಲ್ ಆಫೀಸ್ ಹುದ್ದೆಗೆ ತಕ್ಷಣದ ನೇಮಕಾತಿ ಮೊದಲಾದ ವಿವಿಧ ಬೇಡಿಕೆಗಳನ್ನು ‌ಮುಂದಿಟ್ಟುಕೊಂಡು ಕೇರಳದ ಎಲ್ಲಾ ಸಂಸ್ಕೃತ

ಅಧ್ಯಾಪಕರು ಸಮರ ರಂಗಕ್ಕೆ ಇಳಿದಿದ್ದಾರೆ. ಸಂಸ್ಕೃತೋತ್ಸವ, ಅರೇಬಿಕ್ ಸಾಹಿತ್ಯೋತ್ಸವ ಎಂಬವುಗಳನ್ನು ಮುಂದಿಟ್ಟುಕೊಂಡು ಕಳೆದ ಕಾಲಘಟ್ಟದಲ್ಲಿ ನಡೆದು ಬಂದ ರೀತಿಯಲ್ಲಿ ಕಲೋತ್ಸವವನ್ನು ನಡೆಸಬೇಕು” ಎಂದು ಉಪಜಿಲ್ಲಾ ವಿದ್ಯಾಭ್ಯಾಸ ಅಧಿಕಾರಿಗಳಿಗೆ ಮನವಿ ನೀಡಿದರು. ಈ ಸಂದರ್ಭದಲ್ಲಿ ಸಂಸ್ಕೃತ ಅಧ್ಯಾಪಕ ಫೆಡರೇಶನ್ ಜಿಲ್ಲಾ ಕಾರ್ಯದರ್ಶಿ ಮಧು.ಕೆ, ಜಿಲ್ಲಾ ಭಾರಾವಾಹಿಗಳಾದ ನಾರಾಯಣ ಹೆಗ್ಗಡೆ, ಕೃಷ್ಣ ಪ್ರಸಾದ್, ಪ್ರಜ್ವಲ್ ಶೆಟ್ಟಿ ಉಪಜಿಲ್ಲಾ ಕಾರ್ಯದರ್ಶಿ ಪ್ರಸೀದಾ ಕೆ. ಸಿ, ಪ್ರಮೀಳಾ ಡಿ. ಏನ್, ಶ್ರೀಜಾಕ್ಷಿ, ಶಾಂತಕುಮಾರಿ, ಶ್ರೀ ಲಕ್ಷ್ಮೀ, ಸೌಮ್ಯ ಮೊದಲಾದವರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *