ಪೈವಳಿಕೆ: ತೆಂಗಿನ ಬುಡದಲ್ಲಿ ಬಿದ್ದಿದ್ದ ತೆಂಗಿನ ಕಾಯಿಯನ್ನು ಹೆಕ್ಕಲು ಹೋದ ವ್ಯಕ್ತಿ ನಾಗರ ಹಾವು ಕಡಿದು ಮೃತಪಟ್ಟ ದಾರುಣ ಘಟನೆ ನಡೆದಿದೆ. ಕುರುಡಪದವು ಬಳಿಯ ಪಾರೆಕೋಡಿ ನಿವಾಸಿ ಕೂಲಿ ಕಾರ್ಮಿಕ ಕೃಷ್ಣಪ್ಪ ಮೂಲ್ಯ [72] ಎಂಬವರು ಮೃತಪಟ್ಟಿದ್ದಾರೆ. ಮಂಗಳವಾರ ಸಂಜೆ 4.30ರ ವೇಳೆ ಇವರು ಮನೆ ಬಳಿಯ ತೆಂಗಿನ ಮರದಿಂದ ಬಿದ್ದ ಕಾಯಿಯನ್ನು ಹೆಕ್ಕಲು ಹೋಗಿದ್ದ ವೇಳೆ ನಾಗರ ಹಾವು ಕಡಿದಿದೆ ಎನ್ನಲಾಗುತ್ತಿದೆ ಕೂಡಲೇ ಅವರನ್ನು ಉಪ್ಪಳದ ಖಾಸಾಗಿ ಆಸ್ಪತ್ರೆಗೆ ತಲುಪಿಸಿ ಪ್ರಥಮ ಚಿಕಿತ್ಸೆ ನೀಡದ ಬಳಿಕ ಮಂಗಳೂರು ಕಂಕನಾಡಿ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ರಕ್ಷಿಸಲಾಗಲಿಲ್ಲ. ಮಂಗಳೂರು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬುಧವಾರ ಸಂಜೆ ಮನೆ ಬಳಿಯಲ್ಲಿ ಅಂತ್ಯಸoಸ್ಕಾರ ನಡೆಸಲಾಯಿತು. ಮೃತರು ಪತ್ನಿ ರತ್ನಾವತಿ, ಮಕ್ಕಳಾದ ಪ್ರೇಮ, ವಾರಿಜ, ಜನಾರ್ಧನ, ಸುಜಾತ, ಅಳಿಯಂದಿರಾದ ಗೋಪಾಲಕೃಷ್ಣ, ಚಂದ್ರಶೇಖರ, ಕರುಣಾಕರ, ಸಹೋದರ ಸಹೋದರಿಯರಾದ ನಾರಾಯಣ, ಸುಂದರ, ಯಮುನ, ಕಮಲ, ಸುಮತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.