ವೈದ್ಯ ವೃತ್ತಿ ಬಿಟ್ಟು ವ್ಯಾಪಾರಕ್ಕೆ ಕಾಲಿಟ್ಟ ಲೇಡಿ ಡಾಕ್ಟರ್

Share with

ಹರಿಯಾಣ: ಕೆಲವೊಮ್ಮೆ ನಮ್ಮ ಆಲೋಚನೆಗಳು ಜೀವನವನ್ನು ಬದಲಾಯಿಸುತ್ತವೆ. ವೈದ್ಯ ವೃತ್ತಿ ತೊರೆದು ವ್ಯಾಪಾರ ಕ್ಷೇತ್ರಕ್ಕೆ ಕಾಲಿಡುವುದು ಎಂದರೆ ಅದು ಯೋಚಿಸಲೇಬೇಕಾದ ವಿಚಾರ. ಹರಿಯಾಣದ ಗುರುಗ್ರಾಮದ ಡಾ.ದೃಷ್ಟಿ ಆನಂದ್ ಅವರು ಲಾಭದಾಯಕ ಉದ್ಯೋಗ ತೊರೆದು ‘ಲೆಟ್ಸ್ ಡ್ರೆಸ್ ಅಪ್’ ಎಂಬ ಕಂಪನಿ ಆರಂಭಿಸಿದ್ದಾರೆ.

ಗುರುಗ್ರಾಮದ ಡಾ. ದೃಷ್ಟಿ ಆನಂದ್ ಅವರು ‘ಡಾ. ರಾಮ್ ಮನೋಹರ್ ಲೋಹಿಯಾ ಹಾಸ್ಪಿಟಲ್’ (ಪಿಜಿಐಎಂಇಆರ್) ನಲ್ಲಿ ಅರಿವಳಿಕೆ ವಿಭಾಗದಲ್ಲಿ ಜೂನಿಯರ್ ರೆಸಿಡೆಂಟ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಮೇದಾಂತ ಮತ್ತು ಸಫ್ದರ್ಜಂಗ್ ದೆಹಲಿಯ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸಿದ್ದರು.

ಇವರ ಪತಿ ಫ್ಯಾಷನ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ʼಆ ಕಾಲದಲ್ಲಿ ಜನ ತಮಗೆ ಹೊಂದುವ ಡ್ರೆಸ್‌ಗಳನ್ನು ಹುಡುಕುತ್ತಿದ್ದರು. ಆದರೆ ಅವರು ಸರಿಯಾದ ಸೈಜ್​​ ಹುಡುಕಲು ಗಂಟೆಗಳ ಕಾಲ ಕಳೆಯುತ್ತಾರೆ. ನಿಮ್ಮಂತೆ ಮೂರನೇ ಎರಡರಷ್ಟು ಭಾರತೀಯರು ತಾವು ಧರಿಸುವ ಉಡುಪುಗಳು ಆಯ್ಕೆ ಮಾಡುವಲ್ಲಿ ಗೊಂದಲದಲ್ಲಿರುತ್ತಾರೆʼ ಎಂದು ಹೇಳಿದ್ದಾರೆ. ಈ ಮಾತೇ ದೃಷ್ಟಿ ಆನಂದ್ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ವ್ಯಾಪಾರಕ್ಕೆ ಇಳಿಯಲು ಕಾರಣವಾಯಿತು. ನಂತರ ‘ಲೆಟ್ಸ್ ಡ್ರೆಸ್ ಅಪ್’ ಕಂಪನಿಯ ಪ್ರಾರಂಭಕ್ಕೆ ಅಡಿಪಾಯ ಹಾಕಿದರು.

ಬಳಿಕ 15 ಕೋಟಿ ರೂ. ಬಂಡವಾಳದಲ್ಲಿ ಆರಂಭಿಸಿದ ಉದ್ಯಮ ಇವರ ಬದುಕನ್ನೇ ಬದಲಿಸಿತು. ಡಾ. ದೃಷ್ಟಿರವರ ಕಂಪನಿಯು XS ನಿಂದ 8XL ವರೆಗಿನ ಎಲ್ಲಾ ಗಾತ್ರಗಳಲ್ಲಿ ಬಟ್ಟೆಗಳನ್ನು ನೀಡುತ್ತದೆ. ಈ ಮೂಲಕ ದೇಶದ ಹಲವು ಮಹಿಳೆಯರು ಎದುರಿಸುತ್ತಿದ್ದ ಸಮಸ್ಯೆಗೆ ಪರಿಹಾರ ದೊರಕಿದೆ. ಗಾತ್ರದ ಚಾರ್ಟ್ ಅನ್ನು ರಚಿಸುವ ಮೊದಲು 3000 ಮಹಿಳೆಯರ ಮಾದರಿಯನ್ನು ತೆಗೆದುಕೊಂಡ ಮೊದಲ ಕಂಪನಿಯಾಗಿದೆ.

ಪ್ರತಿ ತಿಂಗಳು ಶೇ.50ರಷ್ಟು ಲಾಭದೊಂದಿಗೆ ಮುನ್ನಡೆಯುತ್ತಿರುವ ಅವರ ಕಂಪನಿಗೆ ‘ಟಾಟಾ ಕ್ಯಾಪಿಟಲ್’ನಿಂದ ಹಣವೂ ಸಿಕ್ಕಿದೆ. ಡಾ.ದೃಷ್ಟಿ ಆನಂದ್ ಅವರ ಸಂಸ್ಥೆಯು 100 ಕೋಟಿ ರೂ.ಗಳ ಗಡಿ ತಲುಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವೃತ್ತಿಜೀವನವನ್ನು ತೊರೆದು ಉದ್ಯಮ ವಲಯದಲ್ಲಿ ತನಗೆ ತಾನೇ ಸವಾಲೊಡ್ಡುತ್ತಿರುವ ಡಾ.ದೃಷ್ಟಿ ಆನಂದ್ ಅನೇಕ ಮಹಿಳೆಯರಿಗೆ ಮಾದರಿಯಾಗಿದ್ದಾರೆ.


Share with

Leave a Reply

Your email address will not be published. Required fields are marked *