ಪುತ್ತೂರಿನ ನೂತನ ಸಹಾಯಕ ಆಯುಕ್ತರಾಗಿ ಮಹೇಶಚಂದ್ರ ಕೆ. ಅಧಿಕಾರ ಸ್ವೀಕಾರ

Share with

ಪುತ್ತೂರು: ನೂತನ ಸಹಾಯಕ ಆಯುಕ್ತರಾಗಿ ಕೆ. ಮಹೇಶಚಂದ್ರರವರು ಜು.10 ರಂದು ಅಧಿಕಾರ ಸ್ವೀಕರಿಸಿದ್ದಾರೆ. ಕೆ.ಐ.ಎ.ಡಿ.ಬಿ.ಯ ಬೈಕಂಪಾಡಿ ಕಚೇರಿಯಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದ ಮಹೇಶಚಂದ್ರ ಕೆ. ಅವರು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಈ ಹಿಂದೆ ಪುತ್ತೂರಿನ ಸಹಾಯಕ ಆಯುಕ್ತರಾಗಿದ್ದ ಗಿರೀಶ್ ನಂದನ್ ಅವರು ಎತ್ತಿನಹೊಳೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದು, ತೆರವಾದ ಹುದ್ದೆಗೆ ಕೆ. ಮಹೇಶಚಂದ್ರ ಆಗಮಿಸಿದ್ದಾರೆ.


Share with

Leave a Reply

Your email address will not be published. Required fields are marked *