ಕಾಸರಗೋಡು: ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕುಟುಂಬ ಸಮೇತ ಬೇಕಲಕ್ಕೆ ಆಗಮಿಸಿದ್ದಾರೆ.
ಕುಟುಂಬ ಸದಸ್ಯರೊಂದಿಗೆ ರಜಾ ದಿನಗಳನ್ನು ಕಳೆಯಲು ಉದುಮ ಬೇವೂರಿನ ಪಂಚನಕ್ಷತ್ರ ಹೊಟೇಲ್ ಲಲಿತಾ ರೆಸಾರ್ಟ್‌ಗೆ ಆಗಮಿಸಿದ್ದಾರೆ.
ಕಾಶ್ಮೀರದಲ್ಲಿನ ಸ್ಥಿತಿಗತಿ ಹಿನ್ನೆಲೆಯಲ್ಲಿ ಅವರಿಗೆ ಬಿಗು ಬಂದೋಬಸ್ತು ವ್ಯವಸ್ಥೆ ಏರ್ಪಡಿಸಲಾಗಿದೆ. ಮಂಗಳೂರಿಗೆ ವಿಮಾನದಲ್ಲಿ ಬಂದ ಅವರು ಅಲ್ಲಿಂದ ಕಾರಿನಲ್ಲಿ ಬೇಕಲ ತಲುಪಿದ್ದಾರೆ. ಒಟ್ಟು 11 ಮಂದಿ ಕುಟುಂಬ ಸದಸ್ಯರಿದ್ದಾರೆ. ಜೂ.22ರಂದು ವಾಪಸಾಗಲಿದ್ದಾರೆ.