ಬದಿಯಡ್ಕ: ಪಕ್ಕದಮನೆಗೆ ತೆಂಗಿನಕಾಯಿ ಕೊಯ್ಯಲೆಂದು ಮನೆಯಿಂದ ಹೊರಟ ಯುವಕ ನಾಪತ್ತೆಯಾಗಿದ್ದು ಈ ಕುರಿತು ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬದಿಯಡ್ಕ ವ್ಯಾಪ್ತಿಯ ಬಾಂಜತ್ತಡ್ಕ ಬಳಿಯ ಇಕ್ಕೇರಿ ನಿವಾಸಿ ವಿ.ವಿ.ಪ್ರಕಾಶ್ ನಾಪತ್ತೆಯಾದ ವ್ಯಕ್ತಿಯಾಗಿದ್ದಾರೆ. ಜೂನ್ .18 ರಂದು ಮದ್ಯಾಹ್ನ 2.30 ಕ್ಕೆ ಇವರು ಮನೆಯಿಂದ ನೆರೆಮನೆಗೆ ಹೋಗುವುದಾಗಿ ಹೇಳಿ ಹೊರಟಿದ್ದರು. ಆದರೆ ನೆರೆಮನೆಗೆ ತಲುಪಿರಲಿಲ್ಲ. ಇವರ ಮೊಬೈಲು ಫೋನು ಬದಿಯಡ್ಕದ ಅಂಗಡಿಯೊಂದರಲ್ಲಿ ದುರಸ್ತಿಗಾಗಿ ನೀಡಲಾಗಿದೆ. ಈ ಬಗ್ಗೆ ಪತ್ನಿ ಊರ್ವಶಿ ಪೊಲೀಸರಿಗೆ ದೂರು ನೀಡಿದ್ದಾರೆ.