ನಕಲಿ ರೇಷನ್ ಕಾರ್ಡ್ಗಳ ಹಾವಳಿ ತಗ್ಗಿಸಲು ಕೇಂದ್ರ ಸರ್ಕಾರ ಹೊಸ ನಿಯಮ ರೂಪಿಸಿದೆ.
ರೇಷನ್ ಕಾರ್ಡ್ಗಳಿಗೆ ಸದಸ್ಯರ ಆಧಾರ್ ಲಿಂಕ್ ಮಾಡಲು ಸರ್ಕಾರ ಸೆಪ್ಟೆಂಬರ್ 30ಕ್ಕೆ ಅಂತಿಮ ಗಡುವು ನೀಡಿದೆ.
ರೇಷನ್ ಕಾರ್ಡ್ದಾರರು ಆಯಾ ರಾಜ್ಯಗಳ ಆಹಾರ ನಿಗಮದ ಅಧಿಕೃತ ವೆಬ್ಸೈಟ್ನಲ್ಲಿ ಒಟಿಪಿ ಮೂಲಕ ಆಧಾರ್ ನಂಬರ್ ಅಪ್ಡೇಟ್ ಮಾಡಲು ಅವಕಾಶವಿದೆ. ಇದಲ್ಲದೆ ನ್ಯಾಯಬೆಲೆ ಅಂಗಡಿಗಳಲ್ಲಿ ಆಫ್ಲೈನ್ ಮೂಲಕ ಈ ಸೇವೆಯನ್ನು ಪಡೆಯಬಹುದು.