ಬೆಂಗಳೂರು: ಮನೆಯಲ್ಲಿದ್ದ ಮಹಿಳೆಯನ್ನು ಕೊಲೆ ಮಾಡಿ, ಐದು ವರ್ಷದ ಮಗುವನ್ನು ಅಪಹರಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೊಳೂರು ಗ್ರಾಮದಲ್ಲಿ ನಡೆದಿದೆ. ಕೊಳೂರು ಗ್ರಾಮದ ನಿವಾಸಿ ಭಾರತಿ(27 ವ) ಕೊಲೆಯಾದ ಮಹಿಳೆ. ಭಾರತಿಯವರ ಪತಿ ಮನೆಗೆ ಬಂದಾಗ ಪತ್ನಿ ಭಾರತಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾಳೆ. ಮಗುವನ್ನ ಹುಡುಕಾಡಿದಾಗ ಮಗು ಎಲ್ಲಿಯೂ ಕಾಣದೆ ಇದ್ದು, ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೇಲ್ನೊಟಕ್ಕೆ ಕಳೆದ ರಾತ್ರಿ ಮನೆಗೆ ನುಗ್ಗಿ ಪ್ರಿಯಕರ ಹರೀಶ್ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.