ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆ

Share with

ನವದೆಹಲಿ: ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗೆ ಸಬ್ಸಿಡಿ ಘೋಷಣೆಯಾಗುವ ಮೂಲಕ ಜನರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕ ಬೆನ್ನಲ್ಲೇ ಈಗ ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ಇಳಿಕೆಯಾಗುವ ಮೂಲಕ ವಾಣಿಜ್ಯ ಬಳಕೆದಾರರರಿಗೂ ಉಡುಗೊರೆ ಸಿಕ್ಕಿದಂತಾಗಿದೆ.

ಪ್ರತಿ ಸಿಲಿಂಡರ್ ಗೆ 158 ರೂ.ನಷ್ಟು ಇಳಿಕೆಯಾಗಿದ್ದು, ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ನಿಗದಿ ಪಡಿಸಿದ ನೂತನ ದರ ಇಂದಿನಿಂದಲೇ ಜಾರಿಗೆ ಬರಲಿವೆ.

ನಿನ್ನೆಯವರೆಗೆ ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 1,768 ರೂ. ಇದ್ದರೆ ದೆಹಲಿಯಲ್ಲಿ 1,680 ರೂ. ಇತ್ತು. ಇಂದಿನಿಂದ 158 ರೂ. ಕಡಿತಗೊಳ್ಳಲಿದೆ.

ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಜುಲೈನಲ್ಲಿ ತಲಾ 7 ರೂ.ಗಳಷ್ಟು ಹೆಚ್ಚಳಗೊಂಡಿದ್ದು, ಆಗಸ್ಟ್ ನಲ್ಲಿ 99.75 ರೂ. ರಷ್ಟು ಕಡಿತಗೊಂಡಿತ್ತು. ಇದೀಗ ಮತ್ತೇ ಇಳಿಕೆಯ ಹಾದಿ ಹಿಡಿದಿದೆ.


Share with

Leave a Reply

Your email address will not be published. Required fields are marked *