ಪೆರ್ಲ: ಕೇರಳ ರಾಜ್ಯ ಕುಟುಂಬಶ್ರೀಯ ಬೆಳ್ಳಿ ಹಬ್ಬ ಆಚರಣೆಯ ಅಂಗವಾಗಿ ಅತ್ಯುತ್ತಮ ಕುಟುಂಬಶ್ರೀಯನ್ನು ಆಯ್ಕೆ ಮಾಡಿ ನೀಡಲಾಗುವ ಮಲೆಯಾಳ ಮನೋರಮ ರಜತಶ್ರೀ ಪುರಸ್ಕಾರವನ್ನು ಕಣ್ಣೂರಿನಲ್ಲಿ ಆ.21ರಂದು ಎಣ್ಮಕಜೆ ಗ್ರಾಮ ಪಂಚಾಯತಿನ ಕುಟುಂಬಶ್ರೀ ಸಿಡಿಎಸ್ ಗೆ ಪ್ರದಾನಿಸಲಾಯಿತು.
10 ಸಾವಿರ ರೂ. ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡ ಪುರಸ್ಕಾರವನ್ನು ಸಿಡಿಎಸ್ ಅಧ್ಯಕ್ಷ ಜಲಜಾಕ್ಷಿ, ಉಪಾಧ್ಯಕ್ಷೆ ಶಶಿಕಲಾ ಹಾಗೂ ಕುಟುಂಬಶ್ರೀ ಸಿಡಿಎಸ್ ಸದಸ್ಯರ ಸಮಕ್ಷಮದಲ್ಲಿ ಪ್ರಶಸ್ತಿ ಪಡೆದುಕೊಳ್ಳಲಾಯಿತು.
ಕಾಸರಗೋಡು ಜಿಲ್ಲೆಯ ತಾಲೂಕು ಮಟ್ಟದಲ್ಲಿ ನಡೆಸಿದ ಆಯ್ಕೆಯಲ್ಲಿ ಮಂಜೇಶ್ವರ ತಾಲೂಕಿನಿಂದ ಎಣ್ಮಕಜೆ ಸಿಡಿಎಸ್, ವೆಳ್ಳರಿಕುಂಡ್ ತಾಲೂಕಿನಿಂದ ಪನತ್ತಡಿ ಸಿಡಿಎಸ್, ಕಾಸರಗೋಡು ತಾಲೂಕಿನಿಂದ ಚೆಮ್ನಾಡ್ ಸಿಡಿಎಸ್, ಹೊಸದುರ್ಗ ತಾಲೂಕಿನಿಂದ ಅಜಾನೂರು ಸಿಡಿಎಸ್ ಪುರಸ್ಕಾರಕ್ಕೆ ಆಯ್ಕೆಯಾಗಿತ್ತು.