ವೀಕ್ಷಕವಾಣಿ: ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್ ಶಾರ್ಟ್ಸ್ನಲ್ಲಿ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಿದ್ದ ಯುವತಿಯನ್ನು, ಆಕೆಯ ಸಹೋದರನೇ ಕೊಲೆ ಮಾಡಿರುವ ಘಟನೆ ಹೈದರಾಬಾದ್ನ ಭದ್ರಾದ್ರಿ ಕೊಥಗುಡೆಂ ಜಿಲ್ಲೆಯ ಯೆಲ್ಲಾಂಡು ಪಟ್ಟಣದಲ್ಲಿ ನಡೆದಿದೆ. 21 ವರ್ಷದ ಟ್ರೈನಿ ನರ್ಸ್ನ್ನು ಸಹೋದರ ಕೊಂದಿದ್ದಾನೆ ಎಂದು ಪೊಲೀಸ್ ತಿಳಿಸಿದ್ದಾರೆ. ಸಾವನ್ನಪ್ಪಿರುವ ಯುವತಿಯನ್ನು ಅಜ್ಮೀರಾ ಸಾಂಘ್ವಿ ಎಂದು ಗುರುತಿಸಲಾಗಿದೆ. ಮೃತ ಅಜ್ಮೀರಾ ಸಾಂಘ್ವಿ ಇತ್ತೀಚೆಗೆ ಆಕ್ಸಿಲಿಯರಿ ನರ್ಸ್ ಮಿಡ್‌ವೈಫ್ ಕೋರ್ಸ್ ಮುಗಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಇನ್ನೂ ಈಕೆಯ ಸಹೋದರ ಹಲವು ಬಾರಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಬೇಡ ಎಂದು ಎಚ್ಚರಿಕೆ ನೀಡಿದ್ದ ಎಂದು ಹೇಳಲಾಗಿದೆ. ಆರೋಪಿಯನ್ನು ಅಜ್ಮೀರಾ ಹರಿಲಾಲ್ ಎಂದು ಗುರುತಿಸಲಾಗಿದೆ.