ಮೊಹರಂ ನಿಮಿತ್ತ ಹಾಕಿದ ಕೆಂಡದಲ್ಲಿ‌ ಕಂಬಳಿ‌ ಹಾಸಿ‌ ಕುಳಿತ ವ್ಯಕ್ತಿ!…

Share with

ಮೊಹರಂ ಹಬ್ಬವು ಹಿಂದುಗಳ ಮತ್ತು ಮುಸ್ಲಿಮರ ಭಾವೈಕ್ಯತೆಯನ್ನು ಸಾರುವ ಒಂದು ಪ್ರಮುಖ ಧಾರ್ಮಿಕ ಹಬ್ಬವಾಗಿದೆ. ಈ ಹಬ್ಬವನ್ನು ಜಿಲ್ಲೆಯಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಪ್ರತಿವರ್ಷ ಈ ಹಬ್ಬದ ಆಚರಣೆ ವೇಳೆ ಜಿಲ್ಲೆಯಲ್ಲಿ ಹಲವೆಡೆ ಪವಾಡಗಳು ಕೇಳಿಬರುತ್ತವೆ. ಈ ಬಾರಿ ಅಂಥದೊಂದು ಪವಾಡಕ್ಕೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಮರಗೋಳ ಗ್ರಾಮ ಸಾಕ್ಷಿಯಾಗಿದೆ.

ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಮರಗೋಳ ಗ್ರಾಮದಲ್ಲಿ ನಿನ್ನೆ ರಾತ್ರಿಯಿಡೀ ಕೆಂಡದ ಸುತ್ತ ಅಲಾಯಿ ಕುಣಿದಿರುವ ಗ್ರಾಮಸ್ಥರು. ಇಂದು  ನಸುಕಿನ ವೇಳೆ ಮೊಹರಂ ನಿಮಿತ್ತ ಹಾಕಿದ್ದ ಕೆಂಡದ ಮೇಲೆ ಭಕ್ತನೊಬ್ಬ ಕಂಬಳಿ ಹಾಸಿಕೊಂಡು ಕುಳಿತಿದ್ದಾನೆ!  ರಾತ್ರಿಯೆಲ್ಲ ಕೆನ್ನಾಲಗೆ ಚಾಚಿದ್ದ ಬೆಂಕಿ ಬೆಳಗಿನ ವೇಳೆ ನಿಗಿನಿಗಿ ಉರಿಯುತ್ತಾ ಇತ್ತು. ಕೆಂಡದ ಸಮೀಪಕ್ಕೆ ಹೋಗಲು ಅಸಾದ್ಯವೆಂಬಷ್ಟು ಕಿಚ್ಚು ಬಡಿಯುತ್ತಿತ್ತು. ಹೀಗಿರುವಾಗ ವ್ಯಕ್ತಿಯೊಬ್ಬ ಕೆಂಡದಲ್ಲಿ ಕುಳಿತಿಕೊಳ್ಳುವುದಿರಲಿ, ನಿಲ್ಲುವುದಕ್ಕೂ ಕೂಡ ಅಸಾಧ್ಯವೆಂಬಷ್ಟು ಕಿಚ್ಚು. ಆದರೆ ಇದು ದೇವರ ಪವಾಡವೋ, ಭಕ್ತಿಯ ಪರಕಾಷ್ಠೆಯೋ ಅಂಥದೊಂದು ಪವಾಡ ನಡೆದಿದೆ.

ಗ್ರಾಮದ ಯಲ್ಲಾಲಿಂಗ ಹಿರೇಹಾಳ ಎಂಬವರು ದೇವರ ಎದುರಿಗೆ ಹಾಕಿದ ಕೆಂಡದಲ್ಲಿ ಕಂಬಳಿ ಹಾಸಿ ಕುಳಿತಿದ್ದು. ಹೀಗೆ ಕೆಲ ಸಮಾಯಾಗಳ ಕಾಲ ಕೆಂಡದಲ್ಲಿ ಕುಳಿತು ಭಕ್ತಿ ಸಮರ್ಪಿಸಿದ್ದಾರೆ, ಅಷ್ಟೇ ಅಲ್ಲದೆ ಬರಿಗೈಯಲ್ಲಿ ಕೆಂಡದ ಉಂಡೆಗಳನ್ನು ಹಿಡಿದು ದೇವರಿಗೆ ಕೆಂಡದಾರತಿ ಮಾಡಿದ್ದಾರೆ. ಇಷ್ಟಾದರೂ ಯಲ್ಲಾಲಿಂಗ ಏನೂ ಹಾಗೇ ಇಲ್ಲವೆಂಬಂತೆ ಇರುವುದು ಕಂಡು ಗ್ರಾಮಸ್ಥರು ಬೆರಗಾಗಿದ್ದಾರೆ. ಬೆಂಕಿ ಮೇಲೆ‌ ಕುಳಿತರೂ, ಕೈಯಿಂದ ಬೆಂಕಿ ತುಂಬಿದರೂ ಯಲ್ಲಾಲಿಂಗನಿಗೆ  ಯಾವುದೇ ಸುಟ್ಟ ಗಾಯಗಲಾಗಿಲ್ಲ. ಯಲ್ಲಾಲಿಂಗನ ಭಕ್ತಿಯ ಪಾರಾಕಷ್ಠತೆಗೆ ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ  ಇದು ಅಲಾಯಿ ದೇವರ ಪವಾಡವೆಂದು‌ ಗ್ರಾಮಸ್ಥರು ಬಲವಾಗಿ ನಂಬಿದ್ದಾರೆ.


Share with

Leave a Reply

Your email address will not be published. Required fields are marked *