ಟೊಮೆಟೋಗಳು ಆರೋಗ್ಯಕರವಾದ ಆಹಾರಗಳು ಆಗಿವೆ. ಸಮಗ್ರ ಆರೋಗ್ಯಕ್ಕೆ ಟೊಮೆಟೋಗಳನ್ನು ಪರಿಪಾಲಿಸುವುದು ಹೊಸದಾಗಿರುವ ಬೆಳೆಗಳಿಗಿಂತ ಮುಂದೆಯೇ ಇದೆ. ಅವುಗಳಲ್ಲಿ ಅನೇಕ ವಿಟಮಿನ್‌ಗಳು, ಕ್ಯಾರೋಟೆನಾಯ್ಡ್‌ಗಳು, ಆಂಟಿಆಕ್ಸಿಡೆಂಟ್‌ಗಳು, ಫೋಲೇಟ್‌ಗಳು ಹಾಗೂ ಪೋಟಾಷಿಯಂ ಅಧಿಕ ಪ್ರಮುಖ ದ್ರಾವಣಗಳು ಇರುತ್ತವೆ. ಆದರೂ ಟೊಮೆಟೊ ತಿಂದರೆ ಕಿಡ್ನಿ ಸ್ಟೋನ್ ಉಂಟಾಗುತ್ತೆ ಅನ್ನೊದು ನಿಜಾನ ?
ಟೊಮೆಟೋ ಭಾರತೀಯ ಅಡುಗೆ ಮನೆಗಳಲ್ಲಿ ಅತ್ಯಂತ ಪ್ರಮುಖ ಆಹಾರದ ಒಂದು ಭಾಗವಾಗಿದೆ. ಟೊಮೆಟೋಗಳ ಬೆಲೆಯು ಈಗ ಗಗನಮುಖಿಯಾಗಿ ಹೋಗಿದೆ. ಹಾಗಾಗಿ ಜನರು ಟೊಮೆಟೋ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.ಟೊಮೆಟೋ ಬೆಲೆ ಹೆಚ್ಚಳದಿಂದಾಗಿ, ಬದಲಿಯಾಗಿ ನಿಂಬೆ, ಹುಣಸೇಹುಳಿಯನ್ನು ಬಳಸಲಾಗುತ್ತಿದೆ. ಆದರೆ ನಿಜವಾಗಿಯೂ ಹೇಳುವುದಾದರೆ ಭಾರತೀಯ ಅಡುಗೆ ಮನೆ ಟೊಮೆಟೋ ಇಲ್ಲದೆ ಅಪೂರ್ಣ.
ಟೊಮೆಟೊಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಟೊಮೆಟೊವನ್ನು ನಿಯಮಿತವಾಗಿ ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಗಳು ಉಂಟಾಗುತ್ತದೆ ಎಂದು ಹಲವರು ನಂಬುತ್ತಾರೆ. ಹಾಗಾಗಿಯೇ ಈ ಭಯದಿಂದ ಎಷ್ಟೋ ಜನ ಟೊಮೇಟೊವನ್ನು ಸೇವಿಸುವುದಿಲ್ಲ.
ಟೊಮೆಟೊ ತಿಂದರೆ ಕಿಡ್ನಿಯಲ್ಲಿ ಕಲ್ಲುಗಳು ಉಂಟಾಗುತ್ತವೆ ಎಂಬ ನಂಬಿಕೆ ನಿಜವಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. ಟೊಮೆಟೊ ಸೇವನೆಯಿಂದ ಕಿಡ್ನಿಯಲ್ಲಿ ಕಲ್ಲುಗಳು ಉಂಟಾಗುವುದಿಲ್ಲ , ಆದರೆ ಮೂತ್ರಪಿಂಡ ದಲ್ಲಿ ಕಲ್ಲು ಸಮಸ್ಯೆ ಇದ್ದವರು ಅತಿಯಾಗಿ ಟೊಮೆಟೊ ಸೇವಿಸಿದರೆ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ